ಗುರುವಾರ , ಅಕ್ಟೋಬರ್ 28, 2021
19 °C

ಪಾಕ್ ಉಗ್ರರಿಂದ ಸ್ಫೋಟದ ಷಡ್ಯಂತ್ರ: ಮಹಾರಾಷ್ಟ್ರ ಎಟಿಎಸ್‌ನಿಂದ ಮತ್ತೊಬ್ಬನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೆಹಲಿ ಪೊಲೀಸರು ಇತ್ತೀಚೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಕೃತ್ಯದ ಷಡ್ಯಂತ್ರವನ್ನು ಬಯಲಿಗೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್‌) ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಓದಿ: ಕರ್ನಾಟಕದಲ್ಲೂ ದಾಳಿಗೆ ಪಾಕ್ ಉಗ್ರರ ಸಂಚು: ಬೆಂಗಳೂರು, ಮೈಸೂರಿನಲ್ಲಿ ಕಟ್ಟೆಚ್ಚರ

ವ್ಯಕ್ತಿಯನ್ನು ಠಾಣೆ ಜಿಲ್ಲೆಯ ಮುಂಬ್ರಾ ಪಟ್ಟಣದಲ್ಲಿ ಬಂಧಿಸಲಾಗಿದ್ದು, ಬಂಧಿತನ ಕುರಿತು ಹೆಚ್ಚಿನ ವಿವರಗಳನ್ನು ಎಟಿಎಸ್‌ ಬಿಡುಗಡೆ ಮಾಡಿಲ್ಲ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಜೋಗೇಶ್ವರಿಯಲ್ಲಿ ಝಾಕೀರ್‌ ಹುಸೇನ್‌ ಶೇಖ್‌ (45) ಎಂಬಾತನ್ನು ಎಟಿಎಸ್‌ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದರು. ಶೇಖ್‌ ನೀಡಿ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಓದಿ: ಪಾಕ್ ಉಗ್ರರ ಭಾರಿ ಷಡ್ಯಂತ್ರ ಬಯಲಿಗೆಳೆದ ದೆಹಲಿ ಪೊಲೀಸ್, ಆರು ಮಂದಿ ಸೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು