ಭಾನುವಾರ, ಮೇ 22, 2022
25 °C

ಮಹಾರಾಷ್ಟ್ರದ ಮಾಜಿ ಸಚಿವ ಎನ್‌.ಡಿ.ಪಾಟೀಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದ ಮಾಜಿ ಸಹಕಾರ ಸಚಿವ ಹಾಗೂ ಪೀಸಂಟ್ಸ್‌ ಆ್ಯಂಡ್‌ ವರ್ಕರ್ಸ್‌ ಪಾರ್ಟಿ (ಪಿಡಬ್ಲ್ಯುಪಿ) ನಾಯಕ ಪ್ರೊ.ಎನ್‌.ಡಿ.ಪಾಟೀಲ್‌ (93) ಸೋಮವಾರ ನಿಧನರಾದರು.

ಟೋಲ್‌ ಸಂಗ್ರಹ ವಿರೋಧಿ ಅಭಿಯಾನ ಸಹಿತ ಮಹಾರಾಷ್ಟ್ರದಲ್ಲಿ ಹಲವು ಚಳವಳಿಗಳ ನೇತೃತ್ವ ವಹಿಸಿದ್ದ ಅವರು ಮೂಲತಃ ಶಿಕ್ಷಣ ತಜ್ಞ. ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಡೀನ್‌ ಅಗಿದ್ದ ಅವರು, 18 ವರ್ಷಗಳ ಕಾಲ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ಕಾನೂನು ಸಮಿತಿಯೊಂದಕ್ಕೆ ಪಾಟೀಲ್‌ ಅವರು ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು