ಶನಿವಾರ, ಮೇ 28, 2022
30 °C

ಮಹಾರಾಷ್ಟ್ರ: ₹ 50 ಕದ್ದ ಮಗನನ್ನು ಹೊಡೆದು ಕೊಂದ ತಂದೆ, ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಠಾಣೆ, ಮಹಾರಾಷ್ಟ್ರ: ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿನ ಕಲ್ವಾ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮನೆಯಿಂದ ₹50 ಕದ್ದ ಎಂಬ ಕಾರಣದಿಂದ ತನ್ನ ಸ್ವಂತ ಮಗನನ್ನೇ ಥಳಿಸಿ ಕೊಂದಿದ್ದು ಆತನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಘೋಬಾ ನಗರದ ಸ್ಲಂ ಕಾಲೋನಿಯಲ್ಲಿ ಗುರುವಾರ ಸಂಜೆ ಸಂದೀಪ್‌ ಬಬ್ಲು ಓಂಪ್ರಕಾಶ್‌ ಪ್ರಜಾಪತಿ (41) ಎಂಬ ವ್ಯಕ್ತಿ ತನ್ನ 10 ವರ್ಷದ ಮಗನನ್ನು ಚೆನ್ನಾಗಿ ಥಳಿಸಿದ್ದರಿಂದ ಬಾಲಕ ನಿತ್ರಾಣವಾಗಿ ನೆಲದ ಮೇಲೆ ಬಿದ್ದಿದ್ದನು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

‘ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ತಂಡವೊಂದು ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮನೆಯಿಂದ ₹50 ಕದ್ದ ಎಂಬ ಕಾರಣದಿಂದ  ತಂದೆಯೇ ಹೊಡೆದಿರುವುದಾಗಿ ಆ ಸಮಯದಲ್ಲಿ ಅಲ್ಲಿದ್ದ ಬಾಲಕನ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ಪೊಲೀಸರು ವಿವರಿಸಿದರು. 

ಪ್ರಜಾಪತಿ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಮೃತ ಬಾಲಕನ ತಾಯಿಯ ವಿಚಾರಣೆ ನಡೆಯುತ್ತಿದೆ ಎಂದು ಕಲ್ವಾ ಪೊಲೀಸ್‌ ಠಾಣೆಯ ಅಧಿಕಾರಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು