ಶನಿವಾರ, ಮೇ 21, 2022
19 °C

ಡ್ರಗ್ಸ್‌ ಪ್ರಕರಣ: ನವಾಬ್‌ ಮಲಿಕ್ ಅಳಿಯನಿಂದ ಫಡಣವೀಸ್‌ಗೆ ಲೀಗಲ್ ನೋಟಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್‌ ಅಳಿಯ ಸಮೀರ್‌ ಖಾನ್‌ ಅವರು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಡ್ರಗ್ಸ್ ಸಂಬಂಧಿತ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಸಮೀರ್ ಖಾನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಫಡಣವೀಸ್‌ ನೀಡಿರುವ ಹೇಳಿಕೆಯಿಂದಾಗಿ ತಮಗೆ ಮಾನಸಿಕ ಹಿಂಸೆ ಮತ್ತು ಆರ್ಥಿಕವಾಗಿ ನಷ್ಟವಾಗಿದೆ ಎಂದು ಸಮೀರ್‌ ಖಾನ್‌ ಆರೋಪಿಸಿದ್ದಾರೆ. ₹ 5 ಕೋಟಿ ನಷ್ಟ ಪರಿಹಾರಕ್ಕಾಗಿ ಫಡಣವೀಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ನವಾಬ್ ಮಲಿಕ್ ಮತ್ತು ಅವರ ಪುತ್ರಿ ನಿಲೋಫರ್ ಮಲಿಕ್ ಖಾನ್ ಅವರು ಲೀಗಲ್ ನೋಟಿಸ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಮಾದಕ ವಸ್ತುಗಳ ಅಕ್ರಮ ಸಂಗ್ರಹದಲ್ಲಿ ಸಮೀರ್ ಖಾನ್ ತೊಡಗಿದ್ದಾರೆ ಎಂದು ಫಡಣವೀಸ್‌ ಆರೋಪಿಸಿದ್ದಾರೆ. ಆದರೆ, ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಎನ್‌ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಫಡಣವೀಸ್‌ ಮಾಡಿರುವ ಒಂದೇ ಒಂದು ಆರೋಪವೂ ಸಹ ದಾಖಲಾಗಿಲ್ಲ. 2021ರ ಜನವರಿಯಲ್ಲಿ ಸಮೀರ್‌ ಖಾನ್‌ ಮನೆಯನ್ನು ಶೋಧಿಸಲಾಗಿದೆ. ಅವರ ಮನೆಯಲ್ಲಿ ಯಾವುದೇ ಅಕ್ರಮ ಹಾಗೂ ಸಂಶಯಾಸ್ಪದ ವಸ್ತು ಕಂಡುಬಂದಿಲ್ಲ. ಆದರೆ, ನೀವು(ಫಡಣವೀಸ್‌) ಯಾವ ಮೂಲಗಳಿಂದ ಇಂತಹ ಸುಳ್ಳು, ಕ್ಷುಲ್ಲಕ ಮತ್ತು ಆಧಾರರಹಿತ ವರದಿಯನ್ನು ಪಡೆದಿದ್ದೀರಿ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ‘ ಎಂದು ಲೀಗಲ್‌ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ಲೀಗಲ್ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ನವಾಬ್ ಮಲಿಕ್, ‘ನಮ್ಮ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂಬ ಆರೋಪದ ಮೇಲೆ ನನ್ನ ಅಳಿಯ ಸಮೀರ್‌ ಖಾನ್‌ ಅವರು ಫಡಣವೀಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಫಡಣವೀಸ್‌ ಅವರು ನಮ್ಮಲ್ಲಿ ಕ್ಷಮೆಯಾಚಿಸದಿದ್ದರೆ ನಾವು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ‘ ಎಂದು ತಿಳಿಸಿದ್ದಾರೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು