ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಂಬ್’ ಎಂದು ಕೂಗಿದ ಪ್ರಯಾಣಿಕ: ಮಲೇಷ್ಯಾಕ್ಕೆ ತೆರಳುವ ವಿಮಾನ ವಿಳಂಬ 

Last Updated 30 ಸೆಪ್ಟೆಂಬರ್ 2022, 14:35 IST
ಅಕ್ಷರ ಗಾತ್ರ

ನವದೆಹಲಿ: ಲಗ್ಗೇಜ್‌ಗಳನ್ನು ‌ಕ್ಯಾಬಿನ್‌ನಲ್ಲಿ ಇಡುವ ವಿಚಾರಕ್ಕೆ ಪ್ರಯಾಣಿಕರಿಬ್ಬರ ನಡುವೆ ಜಗಳ ನಡೆಯುವ ವೇಳೆ ‘ಬಾಂಬ್‌’ ಎಂದು ಕೂಗಿದ ಪರಿಣಾಮ ಮಲೇಷ್ಯಾಕ್ಕೆ ತೆರಳುವ ವಿಮಾನ ಎರಡು ತಾಸಿಗೂ ಹೆಚ್ಚು ತಡವಾಯಿತು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್‌ 173 ನಿಂದ ‘ಬಾಂಬ್’ ಬೆದರಿಕೆ ಬಗ್ಗೆ ಜಾರಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ನಂತರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವಿಮಾನದಲ್ಲಿ ಪರಿಶೀಲನೆ ನಡೆಸಿತು.ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರು ಭಾರತೀಯರನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಸುಮಾರು 2.40 ಗಂಟೆ ತಡವಾಗಿ ವಿಮಾನ ಕ್ವಾಲಾಲಂಪುರಕ್ಕೆ ಪ್ರಯಾಣ ಬೆಳೆಸಿತು ಎಂದು ಅಧಿಕಾರಿಗಳು ಹೇಳಿದರು.

‘ಕ್ಯಾಬಿನ್‌ನಲ್ಲಿ ಲಗ್ಗೇಜ್‌ ಇಡುವ ವಿಚಾರಕ್ಕೆ ಇಬ್ಬರು ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಒಬ್ಬ ಪ್ರಯಾಣಿಕ ಬ್ಯಾಗ್‌ನಲ್ಲಿ ಏನಿದೆ ಎಂದು ಕೇಳಿದಾಗ ಮತ್ತೊಬ್ಬ ‘ಬಾಂಬ್‌’ ಎಂದು ಉತ್ತರಿಸಿದ್ದಾನೆ.ಪೈಲಟ್ ಗೆ ಈ ಬಗ್ಗೆ ಮಾಹಿತಿ ನೀಡಿದಾಗ ವಿಮಾನ ಕೆಳಗಿಸಿ, ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲರ್)ಗೆ ಮಾಹಿತಿ ನೀಡಲಾಯಿತು’ ಎಂದು ಅಧಿಕೃತ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT