ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್‌ನಲ್ಲಿ ಅಗ್ನಿ ಅವಘಡ: 9 ಭಾರತೀಯ ಕಾರ್ಮಿಕರು ಸಾವು

Last Updated 10 ನವೆಂಬರ್ 2022, 16:16 IST
ಅಕ್ಷರ ಗಾತ್ರ

ಮಾಲೆ: ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದ ಅಗ್ನಿ ಅವಘ‌ಢದಲ್ಲಿ ಕನಿಷ್ಠ 10 ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ವರದಿಯಾಗಿದೆ. ಈ ಪೈಕಿ 9 ಮಂದಿ ಭಾರತೀಯರಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿದೇಶಿ ಕಾರ್ಮಿಕರು ವಾಸವಾಗಿರುವ ಇಕ್ಕಟ್ಟಾದ ವಸತಿಗೃಹದಲ್ಲಿ ಈ ಅವಘಡ ಉಂಟಾಗಿದೆ. ಬೆಂಕಿ ದುರಂತದಿಂದ ಧ್ವಂಸವಾದ ಕಟ್ಟಡದ ಮೇಲಿನ ಅಂತಸ್ತಿನಿಂದ 10 ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೆಲ ಮಹಡಿಯಲ್ಲಿರುವ ವಾಹನ ದುರಸ್ತಿ ಗ್ಯಾರೇಜ್‌ನಿಂದ ಬೆಂಕಿ ಅನಾಹುತ ಉಂಟಾಗಿದೆ.

’ಘಟನಾ ಸ್ಥಳದಿಂದ 10 ದೇಹಗಳನ್ನು ಹೊರ ತೆಗೆದಿದ್ದೇವೆ‘ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಎಎಫ್‌ಪಿ ವರದಿ ಮಾಡಿದೆ.

ಮೃತರ ಪೈಕಿ ಓರ್ವ ಬಾಂಗ್ಲಾದೇಶ ಪ್ರಜೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT