ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜೀ, ಆಸ್ಕರ್ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳದಂತೆ ವಿನಂತಿ: ಕಾಂಗ್ರೆಸ್

Last Updated 14 ಮಾರ್ಚ್ 2023, 14:19 IST
ಅಕ್ಷರ ಗಾತ್ರ

ನವದೆಹಲಿ: ಚಲನಚಿತ್ರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರದಾನವಾಗಿದೆ. 95ನೇ ಆಸ್ಕರ್‌ ಪ್ರಶಸ್ತಿಯಲ್ಲಿ ಭಾರತದ ಒಂದು ಕಿರು ಸಾಕ್ಷ್ಯಚಿತ್ರ, ಒಂದು ಸಿನಿಮಾದ ಹಾಡು ಗೌರವಕ್ಕೆ ಪಾತ್ರವಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಆಸ್ಕರ್ ಸಮಾರಂಭದಲ್ಲಿ ಭಾರತದ ಕೀರ್ತಿ ಕುರಿತು ಮಾತನಾಡಿದ್ದಾರೆ. ವಿಜೇತರನ್ನು ಅಭಿನಂದಿಸಿದ ಅವರು, ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಎಂದಿದ್ದಾರೆ.

‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಹಾಗೂ ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಆದರೆ, ನನ್ನ ಏಕೈಕ ವಿನಂತಿಯೆಂದರೆ, ‘ಆಸ್ಕರ್‌’ ವಿಚಾರವಾಗಿ ಆಡಳಿತ ಪಕ್ಷದವರು (ಬಿಜೆಪಿ) ಕ್ರೆಡಿಟ್ ತೆಗೆದುಕೊಳ್ಳಬಾರದು. ನಾವು ನಿರ್ದೇಶನ ಮಾಡಿದ್ದೇವೆ, ನಾವು ಬರೆದಿದ್ದೇವೆ, ಮೋದಿ ಅವರು ನಿರ್ದೇಶನ ಮಾಡಿದ್ದರು ಎಂದು ಹೇಳಿಕೊಳ್ಳಬಾರದು’ ಎಂದು ಖರ್ಗೆ ಹೇಳಿದರು. ಖರ್ಗೆ ಮಾತಿಗೆ ಇಡೀ ಸಂಸತ್‌ ಕ್ಷಣಕಾಲ ನಗೆಗಡಲಲ್ಲಿ ತೇಲಿತು.

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಸಚಿವರಾದ ಪಿಯೂಷ್ ಗೋಯಲ್, ಎಸ್. ಜೈಶಂಕರ್, ಸಚಿವ ಮನ್ಸುಖ್ ಮಾಂಡವಿಯಾ, ಭೂಪೇಂದರ್ ಯಾದವ್ ಮುಗುಳ್ನಕ್ಕರು.

ಈ ಸನ್ನಿವೇಶದ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ದಿ ಎಲಿಫೆಂಟ್‌ ವಿಸ್ಪರರ್ಸ್‌’ ಎಂಬ ಕಿರು ಸಾಕ್ಷ್ಯಚಿತ್ರ, ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು’ ಎಂಬ ಹಾಡು ಆಸ್ಕರ್ ಪ್ರಶಸ್ತಿಯ ಗರಿ ಮುಡಿಸಿಕೊಂಡಿವೆ. ದಿ ಎಲಿಫೆಂಟ್‌ ವಿಸ್ಪರರ್ಸ್‌ ತಮಿಳು ಸಾಕ್ಷ್ಯಚಿತ್ರವಾದರೆ ಆರ್‌ಆರ್‌ಆರ್‌ ತೆಲುಗು ಭಾಷೆಯ ನಿರ್ಮಾಣವಾಗಿರುವ ಸಿನಿಮಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT