ಗುರುವಾರ , ಅಕ್ಟೋಬರ್ 21, 2021
24 °C

ವಿಧಾನಸಭೆ ಸದಸ್ಯರಾಗಿ 7ರಂದು ಮಮತಾ ಪ್ರಮಾಣವಚನ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಅಕ್ಟೋಬರ್‌ 7 (ಗುರುವಾರ) ರಂದು ರಾಜ್ಯ ವಿಧಾನಸಭೆಯ ಸದಸ್ಯರಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಮಾಣ ವಚನ ಬೋಧಿಸುವುದಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಮಂಗಳವಾರ ಹೇಳಿದ್ದಾರೆ.

ಮಮತಾ ಅವರು ಭವಾನಿಪುರ ಉಪಚುನಾವಣೆಯಲ್ಲಿ ದಾಖಲೆಯ 58,835 ಮತಗಳಿಂದ ಜಯ ಗಳಿಸಿದ್ದರು. ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಗೆಲ್ಲುವುದು ಅವರಿಗೆ ಅನಿವಾರ್ಯವಾಗಿತ್ತು. ಭಾನುವಾರ ಉಪಚುನಾವಣೆಯ ಫಲಿತಾಂಶ ಘೋಷಿಸಲಾಗಿತ್ತು.

ಉಪಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಇಬ್ಬರು ಟಿಎಂಸಿ ಶಾಸಕರೂ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

‘ಚುನಾಯಿತ ಸದಸ್ಯರಾದ ಮಮತಾ ಬ್ಯಾನರ್ಜಿ, ಜಾಕಿರ್‌ ಹುಸೈನ್‌ ಮತ್ತು ಅಮಿರುಲ್‌ ಇಸ್ಲಾಮ್‌ ಅವರಿಗೆ ಅಕ್ಟೋಬರ್‌ 7 ರಂದು ಬೆಳಿಗ್ಗೆ 11.45 ಗಂಟೆಗೆ ಪ್ರಮಾಣವಚನ ಬೋಧಿಸಲಾಗುವುದು’ ಎಂದು  ಟ್ವೀಟ್‌ ಮಾಡಿದ್ದಾರೆ.

ಜಾಕಿರ್‌ ಹುಸೈನ್‌ ಜಂಗೀಪುರ ಕ್ಷೇತ್ರ ಮತ್ತು ಅಮಿರುಲ್‌ ಇಸ್ಲಾಂ ಅವರು ಸಂಸರ್‌ಗಂಜ್‌ ಕ್ಷೇತ್ರಗಳಿಂದ ಜಯ ಗಳಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು