ಶನಿವಾರ, ಏಪ್ರಿಲ್ 10, 2021
29 °C

ಕೇಂದ್ರದಿಂದ ಭಾರತದ ಒಕ್ಕೂಟ ವ್ಯವಸ್ಥೆ ಮೇಲೆ ಸರ್ಜಿಕಲ್ ಸ್ಟ್ರೈಕ್: ಮಮತಾ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ 2021ರ ದೆಹಲಿ ಸರಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ) ವಿಧೇಯಕವು ಭಾರತದ ಒಕ್ಕೂಟ ವ್ಯವಸ್ಥೆ ಮೇಲೆ ಮಾಡಿರುವ 'ಸರ್ಜಿಕಲ್ ಸ್ಟೈಕ್' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಲ್ಲದೆ ಕೇಂದ್ರ ಸರ್ಕಾರದ ಜಿಎನ್‌ಸಿಟಿಡಿ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಗಳ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ದೆಹಲಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಮಮತಾ, ಕೇಂದ್ರ ಸರ್ಕಾರದ ಈ ಕ್ರಮವು ಭಾರತದ ಒಕ್ಕೂಟ ವ್ಯವಸ್ಥೆ ಮೇಲೆ ಮಾಡಿರುವ ಸರ್ಜಿಕಲ್ ಸ್ಟೈಕ್ ಆಗಿದೆ ಎಂದು ಆರೋಪಿಸಿದರು.

ಕೇಂದ್ರ ಬಿಜೆಪಿ ಸರ್ಕಾರವು 2021 ದೆಹಲಿ ಸರಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ) ವಿಧೇಯಕವನ್ನು ಮಾರ್ಚ್ 15ರಂದು ಮಂಡಿಸಿತ್ತು.

ಇದನ್ನೂ ಓದಿ: 

ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಪಿಪಿ) ಪಕ್ಷದಿಂದ ಹೀನಾಯ ಹಾಗೂ ಅವಮಾನಕರ ಸೋಲನ್ನು ಅರಗಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಮೂಲಕ ದೆಹಲಿಯನ್ನು ಆಳಲು ಮುಂದಾಗಿದೆ. ಇದುವೇ ಜಿಎನ್‌ಸಿಟಿಡಿ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಗಳ ನೈಜ ಉದ್ದೇಶ ಎಂದು ಉಲ್ಲೇಖಿಸಿದ್ದಾರೆ.

ಮಮತಾ ಬ್ಯಾನರ್ಜಿ ಪತ್ರಕ್ಕೆ ಟ್ವೀಟ್ ಮೂಲಕ ಉತ್ತರ ನೀಡಿರುವ ಕೇಜ್ರಿವಾಲ್, ದೆಹಲಿಯ ಜನತೆಗೆ ದೃಢವಾದ ಬೆಂಬಲ ನೀಡಿರುವುದಕ್ಕೆ ದೀದಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

2021ರ ದೆಹಲಿ ಸರಕಾರ ರಾಷ್ಟ್ರೀಯ ರಾಜಧಾನಿ ವಲಯ (ತಿದ್ದುಪಡಿ) ವಿಧೇಯಕದಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚುವರಿ ಅಧಿಕಾರವನ್ನು ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಇದರಂತೆ ದೆಹಲಿ ಸರ್ಕಾರ ಯಾವುದೇ ಕಾಯ್ದೆ ರಚಿಸುವ ಮುನ್ನ ಲೆಫ್ಟಿನೆಂಟ್ ಗರ್ವನರ್ ಅಭಿಪ್ರಾಯ ಸಂಗ್ರಹಿಸುವುದು ಅನಿವಾರ್ಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು