ಬುಧವಾರ, ಸೆಪ್ಟೆಂಬರ್ 22, 2021
22 °C

ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಯಾದ ಮಮತಾ; ವಿರೋಧ ಪಕ್ಷಗಳ ಒಗ್ಗೂಡಿಸುವ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು.

ಜನಪಥ್‌ನ 'ನಿವಾಸ 10ರಲ್ಲಿ' ನಡೆದ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸಹ ಭಾಗಿಯಾದರು. 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಎದುರು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿರುವ ಟಿಎಂಸಿ ಮುಖ್ಯಸ್ಥೆ ಮಮತಾ, ಹಲವು ಪಕ್ಷಗಳ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ.

'ಸೋನಿಯಾ ಗಾಂಧಿ ಅವರು ಚಹಾಗೆ ಬರುವಂತೆ ಆಹ್ವಾನಿಸಿದ್ದರು. ಅಲ್ಲಿ ರಾಹುಲ್‌ ಸಹ ಇದ್ದರು. ನಾವು ರಾಜಕೀಯ ಪರಿಸ್ಥಿತಿ, ಪೆಗಾಸಸ್‌, ಕೋವಿಡ್‌ ಹಾಗೂ ವಿರೋಧ ಪಕ್ಷಗಳ ಒಗ್ಗೂಡುವಿಕೆಯ ಕುರಿತು ಮಾತುಕತೆ ನಡೆಸಿದೆವು. ಉತ್ತಮ ಮಾತುಕತೆ ನಡೆಯಿತು. ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಹೊರಬರುವ ಭರವಸೆ ಇದೆ' ಎಂದು ಮಮತಾ ಹೇಳಿದರು.

ಇದನ್ನೂ ಓದಿ: ನನ್ನ ಫೋನ್ ಹ್ಯಾಕ್ ಆಗಿದೆ, ಸನ್ನಿವೇಶವು ತುರ್ತು ಪರಿಸ್ಥಿತಿಗಿಂತಲೂ ಗಂಭೀರ: ಮಮತಾ | Prajavani

'ಪೆಗಾಸಸ್‌ ಕುರಿತು ಸರ್ಕಾರವೇಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಜನರಿಗೆ ಆ ಬಗ್ಗೆ ತಿಳಿಯಬೇಕಿದೆ. ನೀತಿ ನಿರೂಪಣೆಗಳು ಸಂಸತ್ತಿನಲ್ಲಿ ಸಾಧ್ಯವಾಗದೆ ಹೋದರೆ, ಅಲ್ಲಿ ಚರ್ಚೆಗಳು ನಡೆಯದೇ ಹೋದರೆ, ಮತ್ತೆ ಇನ್ನೆಲ್ಲಿ ಅವು ನಡೆಯಬೇಕು? ಅದು ಟೀ ಅಂಗಡಿಗಳಲ್ಲಿ ನಡೆಯುವುದಲ್ಲ; ಸಂಸತ್ತಿನಲ್ಲಿ ನಡೆಯುವಂಥದ್ದು...' ಎಂದರು.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದಿದ್ದು, ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು