ಶನಿವಾರ, ಮಾರ್ಚ್ 25, 2023
23 °C
ವಿಶ್ವಭಾರತಿಯ ಕೇಸರೀಕರಣ ಸಲ್ಲದು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಅಮರ್ತ್ಯ ಸೆನ್‌ಗೆ ಭೂದಾಖಲೆ ಹಸ್ತಾಂತರಿಸಿದ ಮಮತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೋಲ್ಬುರ್‌ (ಪಶ್ಚಿಮ ಬಂಗಾಳ): ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್‌ ಅವರು ವಿಶ್ವಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ನಡುವೆ, ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೆನ್ ಅವರಿಗೆ ಆ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ. 

ಬೋಲ್ಪುರದಲ್ಲಿ ಅಮರ್ತ್ಯಸೆನ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ದಾಖಲೆಗಳನ್ನು ಹಸ್ತಾಂತರಿಸಿದ ಬಳಿಕ ಮಾತನಾಡಿದ ಮಮತಾ, ‘ಸೆನ್ ಅವರ ವಿರುದ್ಧದ ಆರೋಪಗಳು ನಿರಾಧಾರವಾದಂತಹವು. ಒತ್ತುವರಿಯ ಆರೋಪವು ಅವರ ಪ್ರತಿಷ್ಠೆಗೆ ಕುಂದು ತರುವಂಥ ಪ್ರಯತ್ನವಾಗಿದೆ. ಅವರನ್ನು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ಇದನ್ನು ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. 

‘ಭವಿಷ್ಯದಲ್ಲಿ ಸೆನ್ ಅವರನ್ನು ಯಾರಿಂದಲೂ ಪ್ರಶ್ನಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸೆನ್ ಅವರಿಗೆ ಝೆಡ್ ಪ್ಲಸ್ ಕೆಟಗರಿಯ ಭದ್ರತೆಯನ್ನು ಒದಗಿಸಲಾಗುವುದು’ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ. 

‘ನಾನು ವಿಶ್ವಭಾರತಿಯನ್ನು ಗೌರವಿಸುತ್ತೇನೆ ಆದರೆ, ಆ ಪವಿತ್ರ ಸಂಸ್ಥೆಯನ್ನು ಕೇಸರಿಕರಣ ಮಾಡುವ ಪ್ರಯತ್ನವನ್ನು ಖಂಡಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು