ಶನಿವಾರ, ಮೇ 21, 2022
19 °C

ಐದು ಬೆಂಜ್ ಕಾರ್ ಖರೀದಿಸಿ ಹಣಕಾಸು ಕಂಪನಿಗೆ ಟೋಪಿ ಹಾಕಿದ್ದ ವ್ಯಕ್ತಿಯ ಸೆರೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುರುಗ್ರಾಮ: ಐದು ಬೆಂಜ್ ಕಾರ್‌ಗಳನ್ನು ಖರೀದಿಸಿ, ವಾಹನ ಸಾಲ ನೀಡುವ ಹಣಕಾಸು ಕಂಪನಿಯೊಂದಕ್ಕೆ ಸುಮಾರು ₹2.18 ಕೋಟಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಗುರುಗ್ರಾಮದ 42 ವರ್ಷದ ಪ್ರಮೋದ್ ಸಿಂಗ್ ಎಂದು ಗುರುತಿಸಲಾಗಿದೆ.

ಪ್ರಮೋದ್ ಸಿಂಗ್ ಈತ ಹಣಕಾಸು ಕಂಪನಿಯನ್ನು ನಂಬಿಸಿ ಐದು ಮರ್ಷಿಡೀಸ್ ಬೆಂಜ್ ಕಾರ್‌ಗಳನ್ನು ಕೊಂಡಿದ್ದ. ಸಾಲ ಪಡೆಯುವಲ್ಲಿ ತನ್ನ ಕೈಚಳಕ ತೋರಿಸಿದ್ದ ಪ್ರಮೋದ್ ಸಿಂಗ್ ಪ್ರಕರಣ ದಾಖಲಾದ ನಂತರ ಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಕಾರ್ ತೆಗೆದುಕೊಳ್ಳುವಾಗ ಹಣಕಾಸು ಕಂಪನಿ ನಂಬಿಸಿದ್ದ. ಬಳಿಕ ಮತ್ತೆ ನಾಲ್ಕು ಬೆಂಜ್ ಕಾರ್‌ಗಳನ್ನು ಖರೀದಿಸಿ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಎಂಬ ಆರೋಪ ಹೊರಿಸಲಾಗಿದೆ.

ಈ ಪ್ರಕರಣದಲ್ಲಿ ಪ್ರಮೋದ್ ಸಿಂಗ್ ಜೊತೆ ಸಾರಿಗೆ ಇಲಾಖೆಯ ಕೆಲ ಅಧಿಕಾರಿಗಳೂ ಕೈ ಜೋಡಿಸಿರುವ ಸಾಧ್ಯತೆ ಇದೆ ಎಂದು ಗುರುಗ್ರಾಮದ ಆರ್ಥಿಕ ಅಪರಾಧಗಳ ಜಂಟಿ ಪೊಲೀಸ್ ಆಯುಕ್ತೆ ಚಾಯಾ ಶರ್ಮಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು