ಗುರುವಾರ , ಏಪ್ರಿಲ್ 15, 2021
26 °C
ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ ಬಳಸಲಾಗುವ ಔಷಧ

12 ರೆಮ್‌ಡಿಸಿವಿರ್ ಚುಚ್ಚುಮದ್ದು ಹೊಂದಿದ್ದ ವ್ಯಕ್ತಿ ಮುಂಬೈಯಲ್ಲಿ ಬಂಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಪ್ರಮುಖವಾಗಿ ಬಳಕೆಯಾಗುವ ‘ರೆಮ್‌ಡಿಸಿವಿರ್‌’ ಔಷಧದ 12 ವಯಲ್‌ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಲಸಿಕೆ ಕೊರತೆ ತೀವ್ರ?: ಮಹಾರಾಷ್ಟ್ರ–ಕೇಂದ್ರದ ನಡುವೆ ಜಟಾಪಟಿ

ಸರ್ಫರಾಜ್‌ ಹುಸೇನ್‌ (22) ಬಂಧಿತ ವ್ಯಕ್ತಿ. ಈತನನ್ನು ಮುಂಬೈನ ಅಂಧೇರಿ ಪ್ರದೇಶದಲ್ಲಿ ಕ್ರೈ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತನಿಂದ ರೆಮ್‌ಡಿಸಿವಿರ್‌ ಔಷಧದ 12 ವಯಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಔಷಧಗಳನ್ನು ಯಾರಿಗೆ ತಲುಪಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿಲ್ಲ. ತನಿಖೆ ಮುಂದುವರಿದಿದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಕೊರತೆ: ಮಹಾರಾಷ್ಟ್ರ ವಿರುದ್ಧ ಕೇಂದ್ರದ ಕಿಡಿ

ಲಸಿಕೆ ಕೊರತೆ ಎಂದು ಆರೋಪಿಸಿದೆ ಮಹಾರಾಷ್ಟ್ರ 

ಮಹಾರಾಷ್ಟ್ರದಲ್ಲಿ ಕೋವಿಡ್‌ ತಡೆ ಲಸಿಕೆ ಮತ್ತು ಕೋವಿಡ್‌ ಔಷಧ ರೆಮ್‌ಡಿಸಿವಿರ್‌ ಕೊರತೆ ತೀವ್ರವಾಗಿದೆ ಎಂದು ವರದಿಯಾಗಿದೆ.

4.8 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿರುವ ಮುಂಬೈನ ಹಲವು ಲಸಿಕೆ ಕೇಂದ್ರಗಳಲ್ಲಿ ಲಸಿಕೆಗಳು ಮುಗಿಯುತ್ತಾ ಬಂದಿವೆ. ಮುಂಬೈನ ಲೋಕಮಾನ್ಯ ತಿಲಕ್‌ ಜನರಲ್‌ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸುವಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಧಾರಾವಿ ಕೊಳೆಗೇರಿಯ ಲಸಿಕೆ ಕೇಂದ್ರದಲ್ಲಿಯೂ ಭಾರಿ ಉದ್ದದ ಸಾಲು ಕಾಣಿಸಿದೆ. 440 ಜನರಿಗೆ ನೀಡುವಷ್ಟು ಲಸಿಕೆ ಮಾತ್ರ ಇದೆ ಎಂದು ಈ ಕೇಂದ್ರದ ಉಸ್ತುವಾರಿ ಹೊಣೆ ಹೊತ್ತಿರುವ ಅಫ್ರಿನಾ ಸುಲ್ತಾನಾ ಖಾನ್‌ ಹೇಳಿದ್ದಾರೆ. ಲಸಿಕೆ ಯಾವಾಗ ಪೂರೈಕೆ ಆಗಬಹುದು ಎಂಬ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು