ಇಬ್ಬರು ಪುರೋಹಿತರ ಹತ್ಯೆ: ಅಪರಾಧಿಗೆ ಜೀವಾವಧಿ ಶಿಕ್ಷೆ

ಬುಲಂದ್‌ಶಹರ್(ಉತ್ತರ ಪ್ರದೇಶ): ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಬುಲಂದ್‌ಶಹರ್‌ನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಅನೂಪ್‌ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ ದೇಗುಲದಲ್ಲಿ ವಾಸವಿದ್ದ ಜಗದೀಶ್ ದಾಸ್ ಮತ್ತು ಸೇವಾ ದಾಸ್ ಎಂಬ ಇಬ್ಬರು ಪುರೋಹಿತರನ್ನು ಮುರಾರಿ ಎಂಬವರು ಇರಿದು ಹತ್ಯೆ ಮಾಡಿದ್ದರು.
ದೇಗಲದ ಬಳಿ ಕಳ್ಳತನಕ್ಕೆ ಯತ್ನಿಸಿದ್ದ ಮುರಾರಿಗೆ ಪುರೋಹಿತರು ಎಚ್ಚರಿಕೆ ನೀಡಿದ್ದರು.
ಇದರಿಂದ ಕೋಪಗೊಂಡಿದ್ದ ಮುರಾರಿ, 2020ರ ಏಪ್ರಿಲ್ 28ರಂದು ದೇಗುಲದ ಆವರಣದಲ್ಲೇ ಇಬ್ಬರು ಪುರೋಹಿತರನ್ನು ಹತ್ಯೆ ಮಾಡಿದ್ದರು.
ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಮುರಾರಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಕ್ಲಬ್ಹೌಸ್ | ಮುಸ್ಲಿಂ ಮಹಿಳೆಯರ ಅವಹೇಳನ: ಸಂಘಟಕರ ವಿವರ ಕೇಳಿದ ದೆಹಲಿ ಪೊಲೀಸ್
ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಮುರಾರಿಗೆ ನ್ಯಾಯಾಧೀಶರು ₹20,000 ದಂಡ ಕೂಡ ವಿಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.