ಶುಕ್ರವಾರ, ಜನವರಿ 27, 2023
24 °C

‘ಬೋಡಾ‘ ಎಂದು ತಮಾಷೆ ಮಾಡಿದ್ದಕ್ಕೆ ಬಾಲ್ಯ ಸ್ನೇಹಿತನನ್ನೇ ಮಹಡಿಯಿಂದ ನೂಕಿ ಕೊಂದ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ಕಾರ್ಯಕ್ರಮವೊಂದರಲ್ಲಿ ತನ್ನನ್ನು ‘ಬೋಡಾ‘ ಎಂದು ತಮಾಷೆ ಮಾಡಿದ ಸ್ನೇಹಿತನನ್ನು ಮಹಡಿ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಲಖನೌನಿಂದ ಸುಮಾರು 125 ಕಿ.ಮಿ ದೂರದಲ್ಲಿ ಇರುವ ಹರ್ದೋಯಿಯಲ್ಲಿ ಈ ಘಟನೆ ನಡೆದಿದೆ.

ಹರ್ದೋಯಿ ಜಿಲ್ಲೆಯ ಮಾಲುಪುರ್‌ ನಿವಾಸಿ ಸುನಿಲ್‌ ಕುಮಾರ್‌ ಎಂಬವರೇ ಮೃತ ದುರ್ದೈವಿ.

ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸುನಿಲ್‌ ಕುಮಾರ್‌ ಹಾಗೂ ಅವರ ಸ್ನೇಹಿತ ಅವಿನಾಶ್‌ ಕುಮಾರ್‌ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಸುನಿಲ್‌ ಕುಮಾರ್‌, ಅವಿನಾಶ್‌ ಅವರನ್ನು ‘ಬೋಡಾ‘ ಎಂದು ಛೇಡಿಸಿದ್ದಾರೆ.

ಇದರಿಂದ ಕುಪಿತಗೊಂಡ ಅವಿನಾಶ್‌, ಸುನಿಲ್‌ ಅವರನ್ನು ಮಹಡಿಯ ಮೇಲಿನಿಂದ ತಳ್ಳಿದ್ದಾರೆ. ಬಿದ್ದ ರಭಸಕ್ಕೆ ಸುನಿಲ್ ಅವರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾರಿಯಾಗದೇ ಮೃತಪ‍ಟ್ಟಿದ್ದಾರೆ.

ಇಬ್ಬರು ಒಂದೇ ಬೈಕ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಊಟದ ವೇಳೆ ಅವಿನಾಶ್‌ ಅವರನ್ನು ಸುನಿಲ್‌ ‘ಬೋಡಾ‘ ಎಂದು ಕರೆದಿದ್ದಾರೆ. ಇದೇ ಕಾರಣಕ್ಕಾಗಿ ಅವಿನಾಶ್‌, ಸುನಿಲ್‌ ಅವರನ್ನು ಮಹಡಿಯಿಂದ ತಳ್ಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ.

ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಅವಿನಾಶ್‌ ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶರುಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು