ಶನಿವಾರ, ಅಕ್ಟೋಬರ್ 31, 2020
27 °C

ಕೃಷಿ ಸುಧಾರಣೆಗೆ ಸಿಂಗ್‌ ನಿರ್ಧರಿಸಿದ್ದರೂ ಕೆಲ ಶಕ್ತಿಗಳು ಬಿಟ್ಟಿರಲಿಲ್ಲ: ತೋಮರ್‌

ಎಎನ್‌ಐ‌ Updated:

ಅಕ್ಷರ ಗಾತ್ರ : | |

ದೆಹಲಿ: ಮನಮೋಹನ್‌ ಸಿಂಗ್‌ ಮತ್ತು ಅಂದಿನ ಕೃಷಿ ಸಚಿವ ಶರದ್‌ ಪವಾರ್‌ ಕೃಷಿ ರಂಗದ ಸುಧಾರಣೆಗೆ ಮುಂದಾಗಿದ್ದರಾದರೂ, ಕೆಲ ಶಕ್ತಿಗಳ ಒತ್ತಡದಿಂದ ಯುಪಿಎ ಇಂಥ ಸುಧಾರಣೆಗೆ ಧೈರ್ಯ ತೋರಿರಲಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಎಎನ್‌ಐಗೆ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಬುಧವಾರ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ.

‘ತಮ್ಮ ಅವಧಿಯಲ್ಲಿ ಇಂಥ ಒಳ್ಳೆ ಕಾಯ್ದೆ ಜಾರಿಗೆ ತರಲಾಗಲಿಲ್ಲ ಎಂಬ ಕಾರಣಕ್ಕೆ ಮತ್ತು ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಮನಮೋಹನ್‌ ಸಿಂಗ್‌ ಮತ್ತು ಅಂದಿನ ಕೃಷಿ ಸಚಿವ ಶರದ್‌ ಪವಾರ್‌ ಅವರು ಕೃಷಿ ಕ್ಷೇತ್ರದ ಸುಧಾರಣೆಗೆ ಮುಂದಾಗಿದ್ದರು. ಆದರೆ, ಕೆಲ ಮಂದಿಯ ಒತ್ತಡಗಳಿಂದಾಗಿ ಯುಪಿಎ ಈ ಸುಧಾರಣೆಗೆ ಧೈರ್ಯ ತೋರಿರಲಿಲ್ಲ,’ ಎಂದು ತೋಮರ್‌ ಹೇಳಿದ್ದಾರೆ.

‘ಹೊಸ ಕೃಷಿ ಕಾಯ್ದೆಯು ರೈತರನ್ನು ಎಪಿಎಂಸಿಯ ಸಂಕೋಲೆಗಳಿಂದ ಬಿಡಿಸಲಿದೆ. ಬಿತ್ತನೆಯ ಅವಧಿಯಲ್ಲೇ ರೈತರಿಗೆ ಬೆಲೆ ಖಾತರಿ ಸಿಗಲಿದೆ. ಈ ಕಾಯ್ದೆ ಜಾರಿಗೆ ಬರಲು ಬಿಡಿ ಎಂದು ನಾನು ರೈತರಲ್ಲಿ ಮನವಿ ಮಾಡುತ್ತೇನೆ. ಇದು ಖಚಿತವಾಗಿಯೂ ರೈತರ ಬದುಕಿನಲ್ಲಿ ಬದಲಾವಣೆ ತರಲಿದೆ,’ ಎಂದು ತೋಮರ್‌ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು