ನವದೆಹಲಿ: ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ಭಾರತಕ್ಕೆ ಬೇಕಾಗಿರುವ ಉಗ್ರ ಮಸೂದ್ ಅಜರ್, ಪಾಕಿಸ್ತಾನದ ಬಹವಾಲ್‌ಪುರದ ಜನನಿಬಿಡ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ಹಿಂದಿ ಸುದ್ದಿವಾಹಿನಿ ‘ಟೈಮ್ಸ್ ನೌ ನವಭಾರತ್’ ವರದಿ ಮಾಡಿದೆ.

ಇದೇ ಕಾರಣಕ್ಕಾಗಿ, ಒಸಾಮ ಬಿನ್ ಲಾಡೆನ್ ಹತ್ಯೆಗಾಗಿ ಅಮೆರಿಕ ನಡೆಸಿದಂಥ ಕಾರ್ಯಾಚರಣೆ ಈಗ ಸಾಧ್ಯವಿಲ್ಲ ಎಂದು ವಾಹಿನಿ ವರದಿ ಮಾಡಿದೆ.

‘ಬಹವಾಲ್‌ಪುರದಲ್ಲಿ ಅಜರ್ ಎರಡು ಮನೆಗಳನ್ನು ಹೊಂದಿದ್ದಾನೆ. ಉಸ್ಮಾನ್–ಒ–ಅಲಿ ಮಸೀದಿ ಪಕ್ಕ ಒಂದು ಮನೆ ಇದ್ದರೆ, ಮತ್ತೊಂದು ಮನೆ ನ್ಯಾಷನಲ್ ಆರ್ಥೋಪಿಡಿಕ್ ಆ್ಯಂಡ್ ಜನರಲ್ ಹಾಸ್ಪಿಟಲ್ ಪಕ್ಕ ಇದೆ. ಸೈನಿಕರು ಈತನ ಮನೆಗೆ ಕಾವಲಿದ್ದಾರೆ. ಈ ಬಗ್ಗೆ ಖಚಿತವಾದ ದೃಶ್ಯ ಸಾಕ್ಷ್ಯಗಳು ತಮಗೆ ದೊರೆತಿವೆ’ ಎಂದು ಚಾನೆಲ್ ಹೇಳಿದೆ.

ಮಸೂದ್ ಅಜರ್, ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ. 2001ರಲ್ಲಿ ಸಂಸತ್ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿ, 2019ರ ಪುಲ್ವಾಮಾ ದಾಳಿಗೆ ಸಂಬಂಧಿಸಿ ಅಜರ್ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.