ಮಂಗಳವಾರ, ಸೆಪ್ಟೆಂಬರ್ 28, 2021
25 °C

ರೈತರ ಸಮಾವೇಶದಲ್ಲಿ ಹಿಂದೂ–ಮುಸ್ಲಿಂ ಏಕತೆಗೆ ಪ್ರಯತ್ನ: ಮಾಯಾವತಿ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಮುಜಾಫರ್‌ನಗರದಲ್ಲಿ ಭಾನುವಾರ ನಡೆದ ಬೃಹತ್‌ ರೈತ ಮಹಾ ಪಂಚಾಯಿತಿಯಲ್ಲಿ ಹಿಂದೂ–ಮುಸ್ಲಿಂ ಏಕತೆಗಾಗಿ ಘೋಷಣೆಗಳನ್ನು ಹಾಕಿರುವುದನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸ್ವಾಗತಿಸಿದ್ದಾರೆ.

ಇದರಿಂದ, 2013ರಲ್ಲಿ ಈ ಜಿಲ್ಲೆಯಲ್ಲಿ ಸಂಭವಿಸಿದ ಹಿಂಸಾಚಾರದ ಕಹಿ ಘಟನೆಯನ್ನು ಮರೆಯಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಕೆಲವರಿಗೆ ಇಂತಹ ಘೋಷಣೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೆಯೇ ಇರಬಹುದು. ಆದರೆ, ರೈತರ ಸಮಾವೇಶದ ಮೂಲಕವೂ ಕೋಮು ಸೌಹಾರ್ದತೆ ಮೂಡಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಇದರಿಂದ, ಬಿಜೆಪಿಯು ದ್ವೇಷದ ಮೂಲಕ ಬಿತ್ತಿರುವ ರಾಜಕೀಯ ನೆಲೆ ಅಳಿಯಲಿದೆ ಎಂದು ಹೇಳಿದ್ದಾರೆ.

2013ರಲ್ಲಿ ಮುಜಫ್ಫರನಗರದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 63 ಮಂದಿ ಸಾವಿಗೀಡಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು