ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಟೀಕೆ ಬಿಟ್ಟು, ನಿಮ್ಮ ಮನೆ ಸರಿ ಮಾಡಿಕೊಳ್ಳಿ: ರಾಹುಲ್‌ಗೆ ಮಾಯಾವತಿ ಸಲಹೆ 

Last Updated 10 ಏಪ್ರಿಲ್ 2022, 8:58 IST
ಅಕ್ಷರ ಗಾತ್ರ

ಲಖನೌ: 'ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಬಿಎಸ್‌ಪಿಯೊಂದಿಗೆ ಮೈತ್ರಿಗೆ ಕಾಂಗ್ರೆಸ್‌ ಪ್ರಯತ್ನಿಸಿತ್ತು. ಆದರೆಅವರು ಸ್ಪಂದಿಸಿಲ್ಲ' ಎಂಬ ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಮಾಯಾವತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾಂಗ್ರೆಸ್ ಮೊದಲು ತನ್ನ ಬಗ್ಗೆ ಚಿಂತಿಸಬೇಕು. ನಮ್ಮ ಪಕ್ಷಕ್ಕೆ ಹಾನಿ ಮಾಡುವ ಸಲುವಾಗಿಯೇ ನಮ್ಮ ವಿರುದ್ಧ ಟೀಕೆ ಮಾಡಲಾಗುತ್ತಿದೆ.ಬಿಎಸ್‌ಪಿ ವಿರುದ್ಧಟೀಕೆ ಮಾಡುವಬದಲು ಕಾಂಗ್ರೆಸ್ ತನ್ನ ಸ್ವಂತ ಮನೆಯನ್ನುಸರಿಮಾಡಿಕೊಳ್ಳಬೇಕು'ಎಂದು ಅವರು ಸಲಹೆ ನೀಡಿದರು.

'ರಾಹುಲ್‌ ಗಾಂಧಿ ಹೇಳಿದ್ದು ಸಂಪೂರ್ಣ ಸುಳ್ಳು. ಇಂಥ ಸುಳ್ಳುಗಳನ್ನು ಹೇಳುವ ಬದಲು ಉತ್ತರ ಪ್ರದೇಶ ಚುನಾವಣೆಯ ಸೋಲಿನ ಬಗ್ಗೆ ಈಗ ಗಮನ ಹರಿಸಬೇಕು' ಎಂದು ಮಾಯವತಿ ಹೇಳಿದರು.

'ಕಾಂಗ್ರೆಸ್ ಇಂತಹ ಟೀಕೆಗಳನ್ನು ಮಾಡುವ ಮೊದಲು 100 ಬಾರಿ ಯೋಚಿಸಬೇಕು. ಕಾಂಗ್ರೆಸ್‌ ಸೋತಿದ್ದು ಬಿಜೆಪಿಯಿಂದಲ್ಲ. ಅದರ ಜಾತಿವಾದಿ ಮನಸ್ಥಿತಿಯಿಂದ. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, ಅಧಿಕಾರದಲ್ಲಿ ಇರದಿದ್ದಾಗಲೂ ಏನನ್ನೂ ಮಾಡಿಲ್ಲ' ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಬಹುಜನ ಸಮಾಜ ಪಕ್ಷವನ್ನು ದೂಷಿಸಲು ಪ್ರಯತ್ನಿಸಿದ್ದರುಎಂದು ಮಾಯಾವತಿ ಆರೋಪಿಸಿದರು.

'ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವು ಬಿಎಸ್‌ಪಿಗೆಮೈತ್ರಿ ಮಾಡಿಕೊಳ್ಳಲು ಮುಂದಾಯಿತು.ಮಾಯಾವತಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವುದಾಗಿಯೂ ಹೇಳಿದೆವು. ಆದರೆ ಅವರುಸ್ಪಂದಿಸಲೇ ಇಲ್ಲ'ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದರು.

'ಸಿಬಿಐ, ಇ.ಡಿ ಮತ್ತು ಪೆಗಾಸಸ್‌ಗೆ ಹೆದರಿ ಮಾಯಾವತಿ ಅವರು ಬಿಜೆಪಿಗೆಉತ್ತರ ಪ್ರದೇಶದಲ್ಲಿ ದಾರಿ ಬಿಟ್ಟುಕೊಟ್ಟಿದ್ದಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT