ಶುಕ್ರವಾರ, ಫೆಬ್ರವರಿ 3, 2023
23 °C

ದೆಹಲಿ ಪಾಲಿಕೆ ಚುನಾವಣೆ | ಬಿಜೆಪಿಯಂತಹ ಭ್ರಷ್ಟ ಪಕ್ಷ ಜನರಿಗೆ ಬೇಕಾಗಿಲ್ಲ: ಎಎಪಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಮ್‌ ಆದ್ಮಿ ಪಕ್ಷವು (ಎಎಪಿ) ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಜನರು ಬಿಜೆಪಿಯಂತಹ ಭ್ರಷ್ಟ ಪಕ್ಷವು ಎಂಸಿಡಿಯಲ್ಲಿ ಅಧಿಕಾರಕ್ಕೇರುವುದನ್ನು ಬಯಸುವುದಿಲ್ಲ ಎಂದು ಹೇಳಿದೆ.

ಎಂಸಿಡಿಗೆ ಡಿಸೆಂಬರ್‌ 4 ರಂದು ಚುನಾವಣೆ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ (ಡಿ.2) ಶುಕ್ರವಾರ ತೆರೆ ಬಿದ್ದಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಪಕ್ಷದ ಹಲವು ನಾಯಕರು ರಾಷ್ಟ್ರ ರಾಜಧಾನಿಯ 250 ವಾರ್ಡ್‌ಗಳಲ್ಲಿ ರೋಡ್‌ ಶೋ ನಡೆಸಿದ್ದಾರೆ. ಪಕ್ಷದ ಅಭ್ಯರ್ಥಿಗಳು 500 ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. ಪಕ್ಷವು 14,862 ಕಡೆ ಜನ ಸಂವಾದ ನಡೆಸಿದೆ. ಪ್ರತಿ ಮತದಾರರನ್ನೂ ತಲುಪಲು ಮನೆಮನೆಗೆ ತೆರಳಿ ಪ್ರಚಾರ ನಡೆಸಲಾಗಿದೆ ಎಂದು ಎಎಪಿ ತಿಳಿಸಿದೆ.

ದೆಹಲಿಯ ಜನರಿಗೆ ಎಂಸಿಡಿಯಲ್ಲಿ ಬಿಜೆಪಿಯಂತಹ ಭ್ರಷ್ಟ ಪಕ್ಷ ಬೇಕಾಗಿಲ್ಲ. ಅವರಿಗೆ ಪ್ರಾಮಾಣಿಕವಾದ ಪಕ್ಷ ಬೇಕು. ಅದಕ್ಕಾಗಿಯೇ ಜನರು ಎಂಸಿಡಿಯಲ್ಲಿ ಕೇಜ್ರಿವಾಲ್ ಮಾದರಿಯನ್ನು ಒತ್ತಾಯಿಸುತ್ತಿದ್ದಾರೆ ಎಂದು ಎಎಪಿ ಹೇಳಿಕೆ ನೀಡಿದೆ.

ಘಾಜಿಪುರ, ಓಖ್ಲಾ ಮತ್ತು ಭಾಲ್‌ಸ್ವಾ ವ್ಯಾಪ್ತಿಯಲ್ಲಿ ಹೂಳು ತುಂಬು ಸ್ಥಳಗಳನ್ನು ಸ್ವಚ್ಛಗೊಳಿಸುವಲ್ಲಿ ಬಿಜೆಪಿಯು ತನ್ನ ಅಧಿಕಾರ ಅವಧಿಯಲ್ಲಿ ವಿಫಲವಾಗಿದೆ ಎಂದು ಪದೇಪದೆ ಟೀಕಿಸಿದೆ.

ಬಿಜೆಪಿ ಹಾಗೂ ಎಎಪಿ ಈ ಬಾರಿ ಎಂಸಿಡಿ ಚುನಾವಣೆಯಲ್ಲಿ ಜಯ ಸಾಧಿಸುವ ವಿಶ್ವಾಸದಲ್ಲಿವೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು