ಗುರುವಾರ , ಮೇ 26, 2022
28 °C

ತಿಂಗಳಿಂದ ಜೈಲಿನಲ್ಲಿರುವ ಹೋರಾಟಗಾರ್ತಿ ನೌದೀಪ್ ಕೌರ್: ಗಮನ ಸೆಳೆದ ಮೀನಾ ಹ್ಯಾರಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಂಜಾಬ್‌ನ 23 ವರ್ಷದ ದಲಿತ, ಟ್ರೇಡ್ ಯೂನಿಯನ್ ಕಾರ್ಯಕರ್ತೆಯೊಬ್ಬರು ಜಾಮೀನು ಸಿಗದೆ ಒಂದು ತಿಂಗಳಿಂದ ಜೈಲಿನಲ್ಲಿರುವ ಪ್ರಕರಣ ಬೆಳಕಿಗೆ ಬಂದಿದೆ.

ಜನವರಿ 12 ರಂದು ಹರಿಯಾಣದ ಕುಂಡ್ಲಿಯಲ್ಲಿ ಕಾರ್ಮಿಕರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌದೀಪ್ ಕೌರ್ ಅವರನ್ನು ಬಂಧಿಸಲಾಯಿತು. ಯುವತಿ ಜಾಮೀನು ಇಲ್ಲದೆ ಸುಮಾರು ಒಂದು ತಿಂಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದು, ಬಂಧನದಲ್ಲಿದ್ದಾಗ ಲೈಂಗಿಕ ಕಿರುಕುಳ ಅನುಭವಿಸಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ. .

ಪಾಪ್ ಗಾಯಕಿ ರಿಯಾನಾ ವಿವಾದದ ಬಳಿಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳಲ್ಲಿ ಒಬ್ಬರಾದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋದರ ಸೊಸೆ ಮೀನಾ ಹ್ಯಾರಿಸ್ ಈ ಬಗ್ಗೆ ಟ್ವೀಟ್ ಮಾಡಿದ ಬಳಿಕ ಪ್ರಕರಣ ಹೆಚ್ಚು ಸುದ್ದಿಯಾಗುತ್ತಿದೆ.

ಶನಿವಾರ, ಮೀನಾ ಹ್ಯಾರಿಸ್ ಅವರು ನೌದೀಪ್ ಕೌರ್ ಅವರ ಬಿಡುಗಡೆಯನ್ನು ಕೋರಿ ಪೋಸ್ಟರ್‌ಗಳ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್ ಮಾಡಿದ ನಂತರ ಸೆಲೆಬ್ರಿಟಿಗಳ ಪೋಸ್ಟರ್ ಸುಡುವ ಚಿತ್ರವನ್ನೂ ಟ್ವೀಟ್ ಮಾಡಿದ್ದಾರೆ.

ಎರಡು ತಿಂಗಳಿಗೂ ಹೆಚ್ಚು ಸಮಯದಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ-ಹರಿಯಾಣ ಗಡಿಯಿಂದ 3 ಕಿ.ಮೀ ದೂರದಲ್ಲಿರುವ ಸೋನಿಪತ್‌ನ ಕುಂಡ್ಲಿ ಕೈಗಾರಿಕಾ ಪ್ರದೇಶದ ಸಂಸ್ಥೆಯೊಂದರಲ್ಲಿ ನೌದೀಪ್ ಕೌರ್ ಕೆಲಸ ಮಾಡುತ್ತಿದ್ದರು.

ನೌದೀಪ್ ಕುಟುಂಬಕ್ಕೂ ಹೋರಾಟದ ಹಿನ್ನೆಲೆ ಇದ್ದು, ಪೋಷಕರು ಪಂಜಾಬ್‌ನ ರೈತ ಸಂಘಗಳ ಸದಸ್ಯರಾಗಿದ್ದಾರೆ. ಸಹೋದರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತೆಯಾಗಿದ್ದಾರೆ. ನೌದೀಪ್ ಅವರು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ "ಮಜ್ದೂರ್ ಅಧಿಕಾರಿ ಸಂಘಟನೆ" ಕಾರ್ಮಿಕ ಸಂಘಕ್ಕೆ ಸೇರಿದ್ದರು.

ಜನವರಿ 12 ರಂದು ಅವರು ಕುಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ 20 ಜನರೊಂದಿಗೆ ವೇತನ ಕೋರಿ ಪ್ರತಿಭಟನೆ ನಡೆಸಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗಿದ್ದರಿಂದ ಅವರನ್ನು ಸಂಘದಿಂದ ವಜಾ ಮಾಡಲಾಗಿತ್ತು. ನಂತರ, ನೌದೀಪ್ ಕೌರ್‌ನನ್ನು ಬಂಧಿಸಿದ ಪೊಲೀಸರು, ಕೊಲೆ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು