ಬುಧವಾರ, ಮಾರ್ಚ್ 3, 2021
18 °C
ಪೂಂಚ್‌ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಯೋಧರ ಕಾರ್ಯಾಚರಣೆ

ಉಗ್ರಗಾಮಿಗಳ ಅಡಗು ತಾಣ ಪತ್ತೆ; ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ವಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಪೂಂಚ್‌ ಜಿಲ್ಲೆಯಲ್ಲಿ ಉಗ್ರಗಾಮಿಗಳ ಅಡಗುತಾಣವನ್ನು ಪತ್ತೆ ಮಾಡಿದ ಗಡಿಭದ್ರತಾ ಪಡೆಯ ಯೋಧರು, ಅದರಲ್ಲಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಮಂಡಿ ಪಟ್ಟಣದಿಂದ 10 ಕಿ.ಮೀ ದೂರದಲ್ಲಿರುವ ಹಡಿಗುಡದ ದೋಬಾ ಮೊಹಲ್ಲಾ ಅರಣ್ಯ ಪ್ರದೇಶದಲ್ಲಿ ಶನಿವಾರ ಬಿಎಸ್‌ಎಫ್‌ನವರು ನಡೆಸಿದ ಕಾರ್ಯಾಚರಣೆಯಲ್ಲಿ ಈ ಅಡಗು ತಾಣವನ್ನು ಪತ್ತೆ ಮಾಡಲಾಗಿದೆ.

ಖಚಿತ ಗುಪ್ತಚರ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಲಾಗಿದೆ. ಅಡಗುತಾಣದಿಂದ ಎಕೆ 47 ರೈಫಲ್‌ ಜತೆಗೆ, ಮೂರು ಮ್ಯಾಗಜಿನ್‌ಗಳು, 82 ಸುತ್ತು ಗುಂಡುಗಳು, ಮೂರು ಚೀನಾದ ಪಿಸ್ತೂಲು ಜತೆಗೆ, ಐದು ಮ್ಯಾಗಜಿನ್‌ಗಳು ಮತ್ತು 33 ರೌಂಡ್ಸ್‌ ಬುಲೆಟ್‌ಗಳು ಮತ್ತು ನಾಲ್ಕು ಹ್ಯಾಂಡ್ ಗ್ರನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ಅಡಗುತಾಣದಲ್ಲಿ ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಬಿಜಿಎಲ್) ಮತ್ತು ವೈರ್‌ಲೆಸ್ ಸೆಟ್ ಸಹ ಕಂಡುಬಂದಿವೆ ಎಂದು ವಕ್ತಾರರು ತಿಳಿಸಿದರು. ನಿರಂತರ ಮಳೆಯ ನಡುವೆಯೂ ಬಿಎಸ್‌ಎಫ್ ಈ ಪ್ರದೇಶದಲ್ಲಿ ಶೋಧಕಾರ್ಯ ಮುಂದುವರಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು