ಬುಧವಾರ, ಡಿಸೆಂಬರ್ 8, 2021
28 °C

#PMModi_RozgarDo: ಪ್ರಧಾನಿ ಮೋದಿ ಉದ್ಯೋಗ ಕೊಡಿ ಎಂದು ಕೇಳಿದ ಲಕ್ಷಾಂತರ ಯುವಕರು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: #PMModi_RozgarDo (ಪ್ರಧಾನಿ ಮೋದಿ ಉದ್ಯೋಗ ಕೊಡಿ) ಎಂಬ ಹ್ಯಾಶ್‌ಟ್ಯಾಗ್‌ ಬಳಸಿ 14 ಲಕ್ಷಕ್ಕೂ ಹೆಚ್ಚು ಟ್ವೀಟ್‌ ಮಾಡಲಾಗಿದ್ದು, ಟ್ವಿಟರ್‌ ಇಂಡಿಯಾದ ಟಾಪ್‌ ಟ್ರೆಂಡಿಂಗ್‌ನಲ್ಲಿದೆ.

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ದೇಶದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಆದ್ದರಿಂದ ಪ್ರಧಾನಿ ಮೋದಿ ಯುವಕರಿಗೆ ಉದ್ಯೋಗ ಕೊಡಬೇಕು ಎಂಬ ಕೂಗು ಟ್ವಿಟರ್‌ನಲ್ಲಿ ಕೇಳಿಬಂದಿದೆ. ಪ್ರಧಾನಿ ಮೋದಿಯವರ ಅಧಿಕೃತ ಖಾತೆಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ಲಕ್ಷಾಂತರ ಯುವಕರು ತಮಗೆ ನೌಕರಿ ಕೊಡಿ ಎಂದು ಒತ್ತಾಯಿಸಿದ್ದಾರೆ. 

'ಕೊರೊನಾ ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರ... ನಿರುದ್ಯೋಗದ ಸಾಂಕ್ರಾಮಿಕ ರೋಗವು ಬರುತ್ತದೆ... ಮತ್ತು ನಿರುದ್ಯೋಗ ಸಾಂಕ್ರಾಮಿಕವು ಕೊರೊನಾಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಈ ಸಾಂಕ್ರಾಮಿಕವು ಸಾಕಷ್ಟು ವಿದ್ಯಾರ್ಥಿಗಳ ಜೀವನವನ್ನು ನಾಶಮಾಡಲಿದೆ. ಆದ್ದರಿಂದ ನಾವು ನಮ್ಮ ಜೀವನದ ಕೊನೆಯವರೆಗೂ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ' ಎಂದು ನಿರುದ್ಯೋಗಿ ವಿರಾಟ್‌ ಸಿಂಹ ಎಂಬುವವರು ಟ್ವೀಟ್‌ ಮಾಡಿದ್ದಾರೆ. 

'ಇಂದು ನಿರುದ್ಯೋಗ ಉತ್ತುಂಗದಲ್ಲಿದೆ. ಯಾರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಮ್ಮ ಪ್ರಧಾನಿ ಇತ್ತೀಚೆಗೆ ಘೋಷಿಸಿದ ಆತ್ಮನಿರ್ಭಾರ ಭಾರತವನ್ನು ಈ ಸಮಸ್ಯೆ ಇಟ್ಟುಕೊಂಡು ಹೇಗೆ ಸೃಷ್ಟಿಸುವುದು? ಎಂದು ಅಶ್ವನಿ ಕುತಾರ್‌ ಎಂಬುವವರು ಪ್ರಶ್ನೆ ಎತ್ತಿದ್ದಾರೆ.

'ನಾವು ಒಂದಾಗೋಣ ಮತ್ತು ನಮ್ಮ ಹಕ್ಕುಗಳಿಗಾಗಿ ಹೋರಾಡೋಣ. ಸರ್ಕಾರ ಯುವಕರ ಧ್ವನಿಯನ್ನು ಕೇಳಲಿ. ನಮಗೆ ಕೆಲಸ ಬೇಕು ಜುಮ್ಲಾ ಅಲ್ಲ. ಎಲ್ಲರೂ ದಯವಿಟ್ಟು ಬೆಂಬಲಿಸಿ' ಎಂದು ಮೀನಾಕ್ಷಿ ಸಿಂಗ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

'ಹೆಚ್ಚುತ್ತಿರುವ ನಿರುದ್ಯೋಗವು ಭಾರತೀಯ ಯುವಕರ ಕನಸುಗಳನ್ನು ಚೂರುಚೂರು ಮಾಡಿದೆ. ಬಿಜೆಪಿ ಸರ್ಕಾರದ ನಿರಾಸಕ್ತಿಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ಮಲಗಿರುವ ಸರ್ಕಾರವನ್ನು ಎಚ್ಚರಗೊಳಿಸಲು ಮಾತನಾಡಿ' ಎಂದು ಅಜಯ್‌ ಯಾದವ್‌ ಎಂಬುವವರು ಹೇಳಿದ್ದಾರೆ. 

'ಉದ್ಯೋಗಗಳು ಎಲ್ಲಿವೆ ಎಂದು ತಿಳಿಯಲು ರಾಷ್ಟ್ರವು ಬಯಸುತ್ತದೆ. ಪ್ರತಿ ಇಲಾಖೆಯಲ್ಲಿ ಖಾಲಿ ಹುದ್ದೆಗಳು ದಿನದಿಂದ ದಿನಕ್ಕೆ ಏಕೆ ಕಡಿಮೆಯಾಗುತ್ತಿವೆ? ಪ್ರತಿಯೊಂದು ಸರ್ಕಾರಿ ಕೆಲಸದ ಆಯ್ಕೆ ಪ್ರಕ್ರಿಯೆಯು ಏಕೆ ನಿಧಾನವಾಗುತ್ತಿದೆ?' ಎಂದು ವಿನಿತ್ ಮಿತ್ತಲ್‌ ಎಂಬುವವರು ಪ್ರಶ್ನಿಸಿದ್ದಾರೆ. 

ಇನ್ನಷ್ಟು ಟ್ವೀಟ್‌ಗಳು ಇಲ್ಲಿವೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು