ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಪ್ರಮುಖರಿಗೆ ಉಸ್ತುವಾರಿ ಹೊಣೆ

Last Updated 9 ಸೆಪ್ಟೆಂಬರ್ 2022, 17:52 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ತನ್ನ ಸಾಂಸ್ಥಿಕ ಸಂಘಟನೆಯಲ್ಲಿ ಗಣನೀಯ ಬದಲಾವಣೆ ಮಾಡಿದೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಒಳಗೊಂಡಂತೆ ಪ್ರಮುಖರಾಗಿ ರಾಜ್ಯಗಳ ಉಸ್ತುವಾರಿ ಸೇರಿದಂತೆ ಪ್ರಮುಖ ಹೊಣೆಗಾರಿಕೆ ನೀಡಿದೆ.

ಇದುವರೆಗೂ ಪಕ್ಷದ ಸಂಘಟನೆಯಲ್ಲಿ ಯಾವುದೇ ಹೊಣೆಗಾರಿಕೆಯು ಇಲ್ಲದಿದ್ದ ಮುಖಂಡರನ್ನು ಗುರುತಿಸಿ, ಈಗಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಾನ ನೀಡಿರುವುದು ಗಮನಾರ್ಹವಾಗಿದೆ.

ಹೊಸದಾಗಿ ಹೊಣೆಗಾರಿಕೆ ಪಡೆದವರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವಿಜಯ್ ರೂಪಾಣಿ, ಬಿಪ್‌ಲಾಪ್ ಕುಮಾರ್‌ ದೇವ್‌, ಮಾಜಿ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌, ಮಹೇಶ್‌ ಶರ್ಮಾ ಅವರು ಪ್ರಮುಖರು.

ರೂಪಾಣಿ ಅವರು ಪಂಜಾಬ್‌ ಮತ್ತು ಚಂಡೀಗಡದ ಉಸ್ತುವಾರಿ ಯಾಗಿದ್ದರೆ, ದೇವ್ ಅವರಿಗೆ ಹರಿಯಾಣ ಮತ್ತು ಜಾವಡೇಕರ್ ಅವರಿಗೆ ಕೇರಳದ ರಾಜ್ಯದ ಪಕ್ಷದ ಉಸ್ತುವಾರಿ ಹೊಣೆ ನೀಡಲಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ಬಿಹಾರ ರಾಜ್ಯದ ಪಕ್ಷದ ಉಸ್ತುವಾರಿ ವಹಿಸ ಲಾಗಿದೆ. ನೆರೆಯ ತೆಲಂಗಾಣ ರಾಜ್ಯದ ಪಕ್ಷದ ಸಹ ಉಸ್ತುವಾರಿ ಗಳಾಗಿ ಅರವಿಂದ್‌ ಮೆನನ್‌, ವಿಜಯ್‌ ರಾಹತ್ಕರ್ ನೇಮಕಗೊಂಡಿದ್ದಾರೆ. ಇವರ ಜೊತೆಗೆ ನರಿಂದರ್ ಸಿಂಗ್‌ ರೈನಾ (ಪಂಜಾಬ್), ಆಶಾ ಲಕ್ರಾ (ಪಶ್ಚಿಮ ಬಂಗಾಳ) ಅವರು ಸಹ ಉಸ್ತುವಾರಿಗಳಾಗಿದ್ದಾರೆ. ಬಿಜೆಪಿ ವಕ್ತಾರರಾದ ಸಂಬೀತ್‌ ಪಾತ್ರಾ ಪಕ್ಷದ ಪ್ರಮುಖ ಸಂಘಟನಾತ್ಮಕ ಹೊಣೆಗಾರಿಕೆಯನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT