ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಆಹ್ವಾನ ಬಂದರೆ ಕೇಂದ್ರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಸೇರ್ಪಡೆ: ಕಮಲ್ ಹಾಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಯಮತ್ತೂರು: ಆಹ್ವಾನ ಬಂದರೆ ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷ ಕೇಂದ್ರದಲ್ಲಿ ಬಿಜೆಪಿ ವಿರುದ್ಧದ ವಿರೋಧಪಕ್ಷಗಳ ಮೈತ್ರಿಕೂಟ ಸೇರಲಿದೆ ಎಂದು ಎಂಎನ್‌ಎಂ ಅಧ್ಯಕ್ಷ ಕಮಲ್‌ ಹಾಸನ್ ತಿಳಿಸಿದ್ದಾರೆ.

ಈಗಿನ ಪರಿಸ್ಥಿತಿ ಮತ್ತು ಆಹ್ವಾನ ಆಧರಿಸಿ ವಿರೋಧಪಕ್ಷ ಸೇರುವುದನ್ನು ಪಕ್ಷ ಪರಿಗಣಿಸಬಹುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ವಿರುದ್ಧ ಮೈತ್ರಿಕೂಟ ಸೇರುವ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಮೇಕೆದಾಟು ಕುರಿತ ಪ್ರಶ್ನೆಗೆ, ನಾನು ಚಲನಚಿತ್ರದಲ್ಲಿ ದ್ವಿಪಾತ್ರಗಳನ್ನು ನಿಭಾಯಿಸಿದ್ದೇನೆ. ರಾಜಕಾರಣದಲ್ಲಿ ದ್ವಿಪಾತ್ರ ನಿಭಾಯಿಸುತ್ತಿರುವವರನ್ನು ನಾನು ಗುರುತಿಸಬಲ್ಲೆ. ಹೆಸರು ಬೇರೆಯಾಗಿರಬಹುದು, ಆದರೆ, ಎಲ್ಲರೂ ಕೇಂದ್ರ ಸರ್ಕಾರದ ಕೈಗೊಂಬೆಯೇ ಆಗಿದ್ದಾರೆ ಎಂದು ಕಮಲ್‌ ಹಾಸನ್ ಅವರು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು