ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಜನಪ್ರಿಯ ನಾಯಕರಲ್ಲಿ ಪ್ರಧಾನಿ ಮೋದಿಗೆ ಅಗ್ರಸ್ಥಾನ

Last Updated 4 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ನಲ್ಲಿ ಶೇಕಡ 70ರಷ್ಟು ಅಂಕಗಳನ್ನು ಪ್ರಧಾನಿ ನರೇಂದ್ರ ಮೋದಿ ಪಡೆದಿದ್ದಾರೆ. ಇದು ಉತ್ತಮ ನಾಯಕ ಎಂದು ಒಪ್ಪುವ ಜನರ ಪ್ರಮಾಣವೂ ಆಗಿದೆ. ಆಗಸ್ಟ್‌ 23ರಂದು ಈ ಪ್ರಮಾಣವು ಶೇಕಡ 72ರಷ್ಟಿತ್ತು.

ಅಮೆರಿಕದ ಮಾಹಿತಿ ಗುಪ್ತಚರ ಕಂಪನಿ 'ಮಾರ್ನಿಂಗ್‌ ಕನ್ಸಲ್ಟ್‌' ಈ ಬಗ್ಗೆ ವಿವರಗಳನ್ನು ಒದಗಿಸಿದೆ. ಚುನಾವಣೆಯಲ್ಲಿ ಆಯ್ಕೆಯಾದ 13 ರಾಷ್ಟ್ರಗಳ ನಾಯಕರ ‘ರಾಷ್ಟ್ರೀಯ ರೇಟಿಂಗ್ಸ್‌’ ಆಧಾರದ ಮೇಲೆ ಈ ರ‍್ಯಾಂಕಿಂಗ್‌ ನೀಡಿದೆ. ಬೇರೆ ಬೇರೆ ದೇಶಗಳಲ್ಲಿ ಮಾದರಿಗಳು ವಿಭಿನ್ನವಾಗಿವೆ ಎಂದು ಅದು ತಿಳಿಸಿದೆ.

ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್‌ ಮ್ಯಾನ್ಯುಲ್‌ ಲೋಪೆಜ್ ಒಬ್ರಡಾರ್‌ ಅವರಿಗೆ ಶೇಕಡ 64ರಷ್ಟು ಅನುಮೋದನೆಯ ರೇಟಿಂಗ್‌ ದೊರೆತಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

ಇಟಲಿ ಪ್ರಧಾನಿ ಮ್ಯಾರಿಯೊ ದ್ರಾಘಿ ಅವರಿಗೆ ಶೇಕಡ 63 ಮತ್ತು ಜರ್ಮನ್‌ ಚಾನ್ಸಲರ್‌ ಏಂಜಲಾ ಮರ್ಕೆಲ್ ಅವರಿಗೆ ಶೇಕಡ 52ರಷ್ಟು ಅನುಮೋದನೆಯ ರೇಟಿಂಗ್‌ ದೊರೆತಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರ್ರಿಸನ್‌ ಶೇಕಡ 48 ಅನುಮೋದನೆಯ ರೇಟಿಂಗ್‌ ಪಡೆದಿದ್ದು, ಇಬ್ಬರೂ ಐದನೇ ಸ್ಥಾನದಲ್ಲಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಅವರಿಗೆ ಶೇಕಡ 45 ಮತ್ತು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಶೇಕಡ 41ರಷ್ಟು ಅನುಮೋದನೆಯ ರೇಟಿಂಗ್‌ ಪಡೆದಿದ್ದಾರೆ.

ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ ಅವರಿಗೆ ಶೇಕಡ 39, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜಾ–ಇನ್‌ ಶೇಕಡ 38, ಸ್ಪೇನ್‌ ಪ್ರಧಾನಿ ಪೆಡ್ರೊ ಸಾಂಛೇಜ್‌ ಶೇಕಡ 35, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಶೇಕಡ 34 ಮತ್ತು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಅವರಿಗೆ ಶೇಕಡ 25 ಅನುಮೋದನೆಯ ರೇಟಿಂಗ್‌ ದೊರೆತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT