ಗುರುವಾರ , ಜುಲೈ 29, 2021
28 °C

ಮಂಕಿ ಬಿ ವೈರಸ್‌ನಿಂದ ಚೀನಾದಲ್ಲಿ ಮೊದಲ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Getty Images

ಬೀಜಿಂಗ್: ಕೋವಿಡ್‌ 19 ಸೋಂಕು ಜಗತ್ತನ್ನು ಕಾಡುತ್ತಿರುವ ಬೆನ್ನಲ್ಲೇ ಚೀನಾದಲ್ಲಿ ಮಂಕಿ ಬಿ ವೈರಸ್‌(ಬಿವಿ) ನಿಂದ ಮೊದಲ ಸಾವಿನ ಬಗ್ಗೆ ವರದಿಯಾಗಿದೆ.

ಬೀಜಿಂಗ್‌ ಮೂಲದ ಪ್ರಾಣಿ ವೈದ್ಯ ಮಂಕಿ ಬಿ ವೈರಸ್‌ನಿಂದ ಮೃತ ಪಟ್ಟಿರುವುದಾಗಿ ಚೀನಾದ ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ. ಇದು ಬಿವಿ ಸೋಂಕಿನಿಂದ ಸಂಭವಿಸಿದ ರಾಷ್ಟ್ರದ ಮೊದಲ ಸಾವು ಎಂದಿದೆ.

ಮಾರ್ಚ್‌ ತಿಂಗಳಲ್ಲಿ ಎರಡು ಮೃತ ಮಂಗಗಳ ದೇಹವನ್ನು ಕೊಯ್ದು ಪರೀಕ್ಷಿಸಿದ ಒಂದು ತಿಂಗಳ ಬಳಿಕ ವಾಕರಿಕೆ ಮತ್ತು ವಾಂತಿ ಶುರುವಾಗಿತ್ತು. ಸಸ್ತನಿಗಳ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷದ ಪುರುಷ ವೈದ್ಯ ಬಿವಿ ಸೋಂಕಿನಿಂದ ಮೃತಪಟ್ಟಿದ್ದಾಗಿ ಚೀನಾದ ರೋಗ ನಿಯಂತ್ರಣ ಮತ್ತು ಪ್ರತಿಬಂಧ ಕೇಂದ್ರ ಶನಿವಾರ ದೃಢಪಡಿಸಿತ್ತು.

ಪ್ರಾಣಿ ವೈದ್ಯನಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 27ರಂದು ಮೃತಪಟ್ಟಿದ್ದರು. ಇದಕ್ಕಿಂದ ಮೊದಲು ಮಂಕಿ ಬಿ ವೈರಸ್‌ನಿಂದ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆತನ ಕುಟಂಬಸ್ಥರು ಹಾಗೂ ಸಂಪರ್ಕಕ್ಕೆ ಬಂದವರನ್ನು ಪರೀಕ್ಷಿಸಲಾಗಿದ್ದು ನೆಗೆಟಿವ್ ವರದಿ ಬಂದಿದೆ ಎಂದು ವರದಿಯಾಗಿರುವುದಾಗಿ 'ಇಂಡಿಯಾ.ಕಾಮ್‌' ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು