ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲೂ ಮಂಕಿಪಾಕ್ಸ್‌ ಪತ್ತೆ: ದೇಶದಲ್ಲಿ 4ಕ್ಕೇರಿದ ಪ್ರಕರಣ

Published : 24 ಜುಲೈ 2022, 14:07 IST
ಫಾಲೋ ಮಾಡಿ
Comments

ನವದೆಹಲಿ: ಪಶ್ಚಿಮ ದೆಹಲಿಯಲ್ಲಿ 34 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್‌ ವೈರಾಣು ಸೋಂಕು ಇರುವುದು ಭಾನುವಾರ ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ರೋಗ ಲಕ್ಷಣಗಳು ಕಾಣಿಸಿಕೊಂಡ ನಂತರ ವ್ಯಕ್ತಿಯನ್ನು ಮೂರು ದಿನಗಳ ಹಿಂದೆಯೇ ಇಲ್ಲಿನ ಲೋಕ ನಾಯಕ ಜಯಪ್ರಕಾಶ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.ಮಂಕಿಪಾಕ್ಸ್ಪತ್ತೆಯಾಗಿ ವ್ಯಕ್ತಿಯಲ್ಲಿನ ಮಾದರಿಯನ್ನು ಸಂಗ್ರಹಿಸಿ, ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ರವಾನಿಸಲಾಗಿತ್ತು.

ಈ ವ್ಯಕ್ತಿಗೆ ವಿದೇಶ ಪ್ರಯಾಣದಯಾವುದೇ ಹಿನ್ನೆಲೆಯಿರಲಿಲ್ಲ. ಆದರೆ,ಇತ್ತೀಚೆಗೆ ಅವರು ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದರು.ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದವರನ್ನು ಗುರುತಿಸಿ, ಪ್ರತ್ಯೇಕವಾಸಕ್ಕೆ ಕ್ರಮ ಕೈಗೊಳ್ಳಲಾಗಿದೆ.ಸೋಂಕಿನ ಮೂಲ ಗುರುತಿಸಲು, ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ತೀವ್ರಗೊಳಿಸಲಾಗಿದೆ. ಮಂಕಿಪಾಕ್ಸ್‌ನಿಂದ ಬಾಧಿತರಾದವರಿಗೆ ಲೋಕ ನಾಯಕ ಜಯಪ್ರಕಾಶ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ಸ್ಥಾಪಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಮಂಕಿಪಾಕ್ಸ್ವೈರಸ್‌ನ ಮೊದಲ ಮೂರು ಪ್ರಕರಣಗಳೂ ಕೇರಳದಲ್ಲಿ ವರದಿಯಾಗಿದ್ದವು. ಮಂಕಿಪಾಕ್ಸ್75ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಶನಿವಾರ ಘೋಷಿಸಿತ್ತು. ಜಾಗತಿಕವಾಗಿ 16,000ಕ್ಕೂ ಹೆಚ್ಚುಮಂಕಿಪಾಕ್ಸ್ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಐವರು ಮೃತಪಟ್ಟಿದ್ದಾರೆ.

ಮಂಕಿಪಾಕ್ಸ್‌ ಭೀತಿ ಬೇಡ: ತಜ್ಞರ ಸಲಹೆ

ನವದೆಹಲಿ (ಪಿಟಿಐ); ‘ಮಂಕಿಪಾಕ್ಸ್‌ ಅತೀ ಕಡಿಮೆ ಪ್ರಸರಣದ ಮತ್ತು ವಿರಳ ಮರಣ ಸಂಭವದ ಸೋಂಕು ಆಗಿದೆ. ಈ ಸೋಂಕಿಗೆ ಜನರು ಆತಂಕಪಡಬೇಕಾಗಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಮುಖ ಸಂಸ್ಥೆಯಾದ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ (ಎನ್‌ಐವಿ) ತಜ್ಞರು ಭಾನುವಾರ ಹೇಳಿದ್ದಾರೆ.

ಎನ್‌ಐವಿಯ ಹಿರಿಯ ವಿಜ್ಞಾನಿ ಡಾ.ಪ್ರಗ್ಯಾ ಯಾದವ್‌, ‘ಇತ್ತೀಚೆಗೆ ಹಲವು ದೇಶಗಳಲ್ಲಿ ಕಾಣಿಸಿ, ಕಳವಳಕ್ಕೆ ಕಾರಣವಾಗಿರುವ ಮಂಕಿಪಾಕ್ಸ್‌ ವೈರಾಣು, ಕಡಿಮೆ ತೀವ್ರತೆಯ ಪಶ್ಚಿಮ ಆಫ್ರಿಕಾದ ವಂಶವಾಹಿನಿಯ ವೈರಸ್‌ ಎನಿಸಿದೆ.ಈ ಹಿಂದೆ ವರದಿಯಾದ ಕಾಂಗೋ ವಂಶಾವಳಿಗಿಂತ ಕಡಿಮೆ ತೀವ್ರತೆ ಹೊಂದಿದೆ. ಭಾರತದಲ್ಲಿ ವರದಿಯಾದ ಪ್ರಕರಣಗಳೂ ಕಡಿಮೆ ತೀವ್ರತೆಯ ಪಶ್ಚಿಮ ಆಫ್ರಿಕಾದ ವಂಶಾವಳಿಯ ಪ್ರಕರಣಗಳಾಗಿವೆ’ ಎಂದು ಪ್ರಗ್ಯಾ ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಚಂದ್ರಕಾಂತ್‌ ಲಹಾರಿಯಾ ‘ಮಂಕಿಪಾಕ್ಸ್‌ ಹೊಸ ವೈರಾಣು ಅಲ್ಲ. ಐದು ದಶಕಗಳ ಹಿಂದೆಯೇ ಕಾಣಿಸಿದೆ. ಇದು ಸೌಮ್ಯ ಲಕ್ಷಣಗಳ ಕಾಯಿಲೆ.ಉಸಿರಾಟದ ಸಮಸ್ಯೆ ಮತ್ತು ಹೆಚ್ಚಿನ ಪ್ರಮಾಣದಲ್ಲಿಲಕ್ಷಣ ರಹಿತವಾಗಿ ಕಾಣಿಸಿದ ಸಾರ್ಸ್‌ –ಕೋವ್‌– 2 ಸಾಂಕ್ರಾಮಿಕಕ್ಕೆ ತದ್ವಿರುದ್ಧವಾಗಿದೆ. ಇದು ಸೋಂಕಿತರೊಂದಿಗೆ ವೈಯಕ್ತಿಕವಾಗಿನಿಕಟ ಸಂಪರ್ಕದಲ್ಲಿದ್ದಾಗ ಮಾತ್ರ ಹರಡುವಂತದ್ದು’ ಎಂದು ಹೇಳಿದ್ದಾರೆ.

ಎನ್‌ಟಿಎಜಿಐನ ಕೋವಿಡ್‌ ವರ್ಕಿಂಗ್‌ ಗ್ರೂಪ್‌ ಮುಖ್ಯಸ್ಥ ಡಾ.ಎನ್‌.ಜೆ. ಅರೋರಾ ಅವರು, ‘ಈ ಕಾಯಿಲೆಗೆ ಆತಂಕಪಡಬೇಕಿಲ್ಲ. ಇದರಿಂದ ಸಾವು ಸಂಭವಿಸುವುದು ಸಹ ವಿರಳ. ಆದರೆ, ವೈಯಕ್ತಿಕವಾಗಿ ಎಲ್ಲರೂ ಎಚ್ಚರ ವಹಿಸುವುದು ಅಗತ್ಯ. ಸೋಂಕಿತರನ್ನು ಮತ್ತು ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕವಾಗಿರಿಸುವುದು, ಬಲವಾದ ಕಣ್ಗಾವಲಿನಿಂದ ಈ ವೈರಾಣು ಹರಡುವುದನ್ನು ತಡೆಗಟ್ಟಬಹುದು’ ಎಂದು ಹೇಳಿದ್ದಾರೆ.

ತೀವ್ರ ಕಣ್ಗಾವಲಿಡಿ: ಡಬ್ಲ್ಯುಎಚ್‌ಒ ಎಚ್ಚರಿಕೆ

ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದೆ. ಈ ಮೊದಲು ಕಾಣಿಸಿದ ಅನೇಕ ದೇಶಗಳಿಗೆ ಅದು ಹರಡುತ್ತಿದೆ. ತೀವ್ರ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿಡಾ.ಪೂನಮ್‌ ಖೇತ್ರಪಾಲ್‌ ಸಿಂಗ್‌ ಭಾನುವಾರಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT