ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುರ್ಕಿನಾ ಫಾಸೊ: 70ಕ್ಕೂ ಹೆಚ್ಚು ಸೈನಿಕರ ಹತ್ಯೆ

Last Updated 25 ಫೆಬ್ರುವರಿ 2023, 16:18 IST
ಅಕ್ಷರ ಗಾತ್ರ

ಔಗಾಡೌಗು (ಬುರ್ಕಿನಾ ಫಾಸೊ): ಉತ್ತರ ಬುರ್ಕಿನಾ ಫಾಸೊದಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು (ಐಎಸ್‌) ನಡೆಸಿದ ದಾಳಿಯಲ್ಲಿ 70ಕ್ಕೂ ಹೆಚ್ಚಿನ ಸೈನಿಕರು ಮೃತಪಟ್ಟಿದ್ದಾರೆ.

‘ದಾಳಿಯ ವೇಳೆ ಅನೇಕ ಸೈನಿಕರು ಗಾಯಗೊಂಡಿದ್ದಾರೆ. ಐವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದ್ದು, ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಐಎಸ್‌ನ ಸುದ್ದಿಸಂಸ್ಥೆ ಅಮಾಕ್ ಶುಕ್ರವಾರ ತನ್ನ ವರದಿಯಲ್ಲಿ ಹೇಳಿದೆ.

ಮಿಲಿಟರಿ ಸಮವಸ್ತ್ರದಲ್ಲಿ ಮೃತಪಟ್ಟ 54 ಸೈನಿಕರ ರಕ್ತಸಿಕ್ತ ದೇಹಗಳು, 50ಕ್ಕೂ ಹೆಚ್ಚು ರೈಫಲ್‌ಗಳು ಮತ್ತು ಒತ್ತೆಯಾಳಾಗಿ ಇರಿಸಿಕೊಂಡ ಐವರು ಸೈನಿಕರ ಚಿತ್ರಗಳನ್ನು ಐಎಸ್ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT