ಗುರುವಾರ , ಜನವರಿ 28, 2021
26 °C

ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ: ಇಬ್ಬರು ಸಿಂಧ್ಯಾ ನಿಷ್ಠರ ಮರು ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ನಿಷ್ಠರಾಗಿದ್ದ ಇಬ್ಬರು ಶಾಸಕರಿಗೆ ಸ್ಥಾನಕಲ್ಪಿಸಿದ್ದಾರೆ.

ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ನೂತನ ಸಚಿವರಾದ ತುಳಸಿರಾಂ ಸಿಲಾವತ್ ಮತ್ತು ಗೋವಿಂದ್ ರಾಜಪೂತ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಸೇರಿ ಹಲವು ಮುಖಂಡರು ಹಾಜರಿದ್ದರು.

ಈ ಇಬ್ಬರು ಸೇರಿದಂತೆ 15 ಮಂದಿ ಕಾಂಗ್ರೆಸ್‌ ಪಕ್ಷದಿಂದ ನಿರ್ಗಮಿಸಿದ್ದರಿಂದ ಹಿಂದಿನ, ಕಮಲನಾಥ್ ನೇತೃತ್ವದ ಸರ್ಕಾರ ಪದಚ್ಯುತಿಗೊಂಡಿತ್ತು. ಮಾರ್ಚ್ 2020ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೌಹಾಣ್ ಮೂರನೇ ಬಾರಿ ಸಂಪುಟ ವಿಸ್ತರಿಸಿದ್ದಾರೆ.

ಸಿಲಾವತ್ ಮತ್ತು ರಾಜಪೂತ್ ಇಬ್ಬರೂ ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ವಿಸ್ತರಣೆಯಲ್ಲಿ ಸಂಪುಟ ಸೇರಿದ್ದರು. ಆದರೆ, ಶಾಸನಸಭೆ ಸದಸ್ಯರಾಗಿಲ್ಲದಿದ್ದ ಕಾರಣಕ್ಕೆ ಅಕ್ಟೋಬರ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.

ಶಾಸನಸಭೆಯ ಸದಸ್ಯರಲ್ಲದವರೂ ಸಂಪುಟ ಸೇರಿದ್ದು, ಆರು ತಿಂಗಳ ಅವಧಿಯಲ್ಲಿ ಶಾಸನಸಭೆಗೆ ಆಯ್ಕೆ ಆಗಬೇಕು ಎಂಬುದು ನಿಯಮ. ಈ ಹಿಂದದೆ ಜುಲೈ 2 ಮತ್ತು ಅದಕ್ಕೂ ಹಿಂದೆ ಏಪ್ರಿಲ್‌ 21ರಲ್ಲಿ ಚೌಹಾಣ್ ಅವರು ಸಂಪುಟ ವಿಸ್ತರಿಸಿದ್ದರು. ನ 3ರಂದು 28 ಕ್ಷೇತ್ರಗಳ  ಉಪ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು