ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ವಿಷಯ ಪೋಸ್ಟ್ ಮಾಡಿದ ಹ್ಯಾಕರ್‌ಗಳು

Last Updated 13 ಜುಲೈ 2021, 14:37 IST
ಅಕ್ಷರ ಗಾತ್ರ

ಇಂದೋರ್(ಪಿಟಿಐ): ಇಂದೋರ್ ಪೊಲೀಸರ ವೆಬ್‌ಸೈಟ್ ಮಂಗಳವಾರ ಹ್ಯಾಕ್ ಮಾಡಿರುವ ಹ್ಯಾಕರ್‌ಗಳು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ವಿಷಯವನ್ನು ಪ್ರಕಟಿಸಿದ್ದಾರೆ.

ಹ್ಯಾಕರ್‌ಗಳು ಪಾಕಿಸ್ತಾನವನ್ನು ಶ್ಲಾಘಿಸಿ, ‘ಮುಕ್ತ ಕಾಶ್ಮೀರ’ ಎಂಬ ಘೋಷಣೆಯ ಬರಹವನ್ನು ಪೋಸ್ಟ್‌ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳ ವಿವರಗಳು, ಹುದ್ದೆಗಳು ಮತ್ತು ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ವೆಬ್‌ಸೈಟ್‌ನ ‘ನಮ್ಮನ್ನು ಸಂಪರ್ಕಿಸಿ’ ವಿಭಾಗದ ಮೇಲೆ ಹ್ಯಾಕರ್ಸ್‌ಗಳು ಸೈಬರ್‌ ದಾಳಿ ನಡೆಸಿದ್ದಾರೆ.

ಅಧಿಕಾರಿಗಳ ಪ್ರಕಾರ, ವೆಬ್‌ಸೈಟ್‌ನಲ್ಲಿ ‘ಮುಹಮ್ಮದ್ ಬಿಲಾಲ್ ಟೀಮ್ ಪಿಸಿಇ’ ಸಂದೇಶ ಬರೆಯುವ ಮೂಲಕ ಅದನ್ನು ತಾವೇ ಹ್ಯಾಕ್ ಮಾಡಿರುವುದಾಗಿ ಹ್ಯಾಕರ್ಸ್‌ಗಳು ಹೇಳಿಕೊಂಡಿದ್ದಾರೆ.

ಇಂದೋರ್ ಪೊಲೀಸ್ ವೆಬ್‌ಸೈಟ್ ಅನ್ನು ನಗರ ಅಪರಾಧ ವಿಭಾಗವು ನಿರ್ವಹಿಸುತ್ತದೆ. ವೆಬ್‌ಸೈಟ್ ಅನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಲು ತಾಂತ್ರಿಕ ತಜ್ಞರ ಸಹಾಯದಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರಸಾದ್ ಪರಾಶರ್ ತಿಳಿಸಿದ್ದಾರೆ.

‘ಹ್ಯಾಕರ್ಸ್‌ಗಳ ಬಗ್ಗೆ ವಿವರ ಕಲೆಹಾಕಲು ನಾವು ಈ ಬಗ್ಗೆ ಆಳ ತನಿಖೆ ನಡೆಸುತ್ತಿದ್ದೇವೆ ಮತ್ತು ಈ ಬಗ್ಗೆ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಪರಾಶರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT