ಬುಧವಾರ, ಜುಲೈ 6, 2022
22 °C
ಮಧ್ಯಪ್ರದೇಶದ ಖರ್ಗೊನ್ ಹಿಂಸಾಚಾರದ ವೇಳೆ ನಡೆದಿದ್ದ ಘಟನೆ

ಪೊಲೀಸ್ ಮೇಲೆ ಗುಂಡು ಹಾರಿಸಿದ್ದ ಆರೋಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್/ಖರ್ಗೊನ್: ಮಧ್ಯಪ್ರದೇಶದ ಖರ್ಗೊನ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಗಲಭೆ ವೇಳೆ ಪೊಲೀಸ್ ಎಸ್‌ಪಿ ಸಿದ್ಧಾರ್ಥ್ ಚೌಧರಿ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಶನಿವಾರ ಮಾಹಿತಿ ನೀಡಿದ ನಿಮಾರ್ ವಲಯದ ಐಜಿಪಿ ತಿಲಕ್ ಸಿಂಗ್ ಅವರು, ಖರ್ಗೊನ್ ಪ್ರದೇಶದ ಸಂಜಯ್ ನಗರದಲ್ಲಿ ಏಪ್ರಿಲ್ 10ರಂದು ಸಂಭವಿಸಿದ ಗಲಭೆ ವೇಳೆ ಪೊಲೀಸ್ ಅಧಿಕಾರಿ ಮೇಲೆ ಗುಂಡು ಹಾರಿಸಿದ್ದ ಆರೋಪಿ ಮೊಹಸಿನ್ ಅಲಿಯಾಸ್ ವಾಸೀಂ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ದೌರ್ಜನ್ಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಮಾರಾಟ ಸೇರಿದಂತೆ 4 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು