ಕಪ್ಪುಶಿಲೀಂಧ್ರ ಚಿಕಿತ್ಸೆ: ಯುವ ರೋಗಿಗಳಿಗೆ ಆದ್ಯತೆಗೆ ಸೂಚನೆ

ನವದೆಹಲಿ: ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡುವಾಗ ಯುವ ರೋಗಿಗಳನ್ನು ಆದ್ಯತೆಯಾಗಿ ಪರಿಗಣಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸೋಂಕಿಗೆ ಔಷಧವಾಗಿ ಆ್ಯಂಫೊಟೆರಿಸಿನ್–ಬಿ ಬಳಸಲಾಗುತ್ತಿದೆ
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್) ರಾಷ್ಟ್ರೀಯ ಕಾರ್ಯಪಡೆ ಜೊತೆ ಸಮಾಲೋಚನೆ ನಡೆಸಿದ ಬಳಿಕ ಕೇಂದ್ರ ಈ ಸೂಚನೆ ನೀಡಿದೆ. ಆ್ಯಂಫೊಟೆರಿಸಿನ್–ಬಿ ಔಷಧ ಬಳಸಿ ಚಿಕಿತ್ಸೆ ನೀಡಲು ಸರ್ಕಾರವು ಎರಡು ನಿರ್ದಿಷ್ಟ ವರ್ಗದ ರೋಗಿಗಳನ್ನು ಗುರುತಿಸಿದ್ದು, ಈ ಪೈಕಿ ಯುವ ಜನತೆಗೆ ಹೆಚ್ಚು ಗಮನ ನೀಡಲು ತಿಳಿಸಿದೆ.
ಸೋಂಕಿಗೆ ಚಿಕಿತ್ಸೆ ನೀಡಲು ಕಡಿಮೆ ಪ್ರಮಾಣದ ಔಷಧ ಲಭ್ಯವಿರುವುದನ್ನು ಪ್ರಸ್ತಾಪಿಸಿದ್ದ ದೆಹಲಿ ಹೈಕೋರ್ಟ್, ‘ಹಿರಿಯ ನಾಗರಿಕರು ಜೀವನ ನಡೆಸಿದ್ದಾರೆ. ಆದರೆ ದೇಶದ ಭವಿಷ್ಯವಾಗಿರುವ ಯುವಜನರನ್ನು ಈ ಸೋಂಕಿನಿಂದ ರಕ್ಷಿಸಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿತ್ತು. ಕೋರ್ಟ್ ಈ ಪ್ರಸ್ತಾಪ ಮಾಡಿದ ಮರುದಿನ ಕೇಂದ್ರ ಈ ನಿರ್ಧಾರ ಪ್ರಕಟಿಸಿದೆ.
ದೇಶದಲ್ಲಿ ಕಪ್ಪು ಶಿಲೀಂಧ್ರ ಸೋಂಕು ಇರುವ 28 ಸಾವಿರ ಪ್ರಕರಣಗಳು ವರದಿಯಾಗಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.