ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಲ್ಲಿ 3 ಬಸ್‌ಗೆ ಬೆಂಕಿ: 400 ಸಿಎನ್‌ಜಿ ಬಸ್ ಸಂಚಾರ ನಿರ್ಬಂಧಿಸಿದ ‘ಬೆಸ್ಟ್‌’

Last Updated 23 ಫೆಬ್ರವರಿ 2023, 4:36 IST
ಅಕ್ಷರ ಗಾತ್ರ

ಮುಂಬೈ: ಮುಂಬೈನಲ್ಲಿ ತಿಂಗಳ ಅಂತರದಲ್ಲೇ ಮೂರು ಟಾಟಾ ಸಿಎನ್‌ಜಿ ಬಸ್‌ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಮುಂಬೈ ‘ವಿದ್ಯುತ್‌ ಪೂರೈಕೆ ಮತ್ತು ಸಾರಿಗೆ ಇಲಾಖೆ (ಬೆಸ್ಟ್‌)’ ಗಂಭೀರವಾಗಿ ಪರಿಗಣಿಸಿದೆ. ಅದರಂತೇ, 400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿದೆ.

ಮುಂಬೈನ ಅಂದೇರಿಯ ರೈಲ್ವೆ ನಿಲ್ದಾಣದ ಸಮೀಪ ಬುಧವಾರ ಟಾಟಾ ಸಿಎನ್‌ಜಿ ಬಸ್‌ವೊಂದು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಘಟನೆಯಲ್ಲಿ ಯಾರೊಬ್ಬರಿಗೂ ಹಾನಿಯುಂಟಾಗಿರಲಿಲ್ಲ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೂ ಹಿಂದೆ ಎರಡು ಬಸ್‌ಗಳು ಇದೇ ರೀತಿ ಸಂಪೂರ್ಣ ಸುಟ್ಟು ಹೋಗಿದ್ದವು. ಒಂದೇ ತಿಂಗಳ ಅಂತರದಲ್ಲಿ ಒಂದೇ ಮಾದರಿಯ ಮೂರು ಬಸ್‌ಗೆ ಬೆಂಕಿ ಬಿದ್ದಿರುವ ಹಿನ್ನೆಲೆಯಲ್ಲಿ ‘ಬೆಸ್ಟ್‌’ ಸಂಚಾರ ನಿರ್ಬಂಧದ ನಿರ್ಧಾರಕ್ಕೆ ಬಂದಿದೆ.

ಎಂ/ಎಸ್‌ ಮಾತೇಶ್ವರಿ ಲಿಮಿಟೆಡ್‌ ಈ ಬಸ್‌ಗಳ ನಿರ್ವಹಣೆಯ ಹೊಣೆ ಹೊತ್ತಿದೆ.

ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಮಾಡಲು, ಸುರಕ್ಷತೆಯನ್ನು ಮೂಲ ತಯಾರಕರು (ಟಾಟಾ) ಮತ್ತು ನಿರ್ವಾಹಕರು (ಎಂ/ಎಸ್‌ ಮಾತೇಶ್ವರಿ ಲಿಮಿಟೆಡ್‌) ಖಚಿತಪಡಿಸಿಕೊಳ್ಳುವವರೆಗೂ ಎಲ್ಲಾ 400 ಬಸ್‌ಗಳ ಸಂಚಾರ ನಿರ್ಬಂಧಿಸಲು ‘ಬೆಸ್ಟ್‌’ ಆದೇಶಿಸಿದೆ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಲೋಕೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT