ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಟ್ಯೂಷನ್ ಮುಗಿಸಿ ಬರುತ್ತಿದ್ದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿ ವಶ

Last Updated 29 ನವೆಂಬರ್ 2022, 14:20 IST
ಅಕ್ಷರ ಗಾತ್ರ

ಮುಂಬೈ: ಟ್ಯೂಷನ್‌ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಅಂಧೇರಿಯಲ್ಲಿ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು 30 ವರ್ಷ್ ಸಲ್ಮಾನ್ ಖುರೇಶಿ ಎಂದು ಗುರುತಿಸಲಾಗಿದೆ. ಆತನಿಂದ ಮರ್ಸಿಡಿಸ್ ಬೆಂಜ್ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಸಂಜೆ ವೇಳೆ ಟ್ಯೂಷನ್‌ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಬಾಲಕಿಯರನ್ನು ಹಿಂಬಾಲಿಸಿಕೊಂಡ ಬಂದಿದ್ದ ಆರೋಪಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯರು ನೀಡಿದ ಮಾಹಿತಿ ಆಧರಿಸಿ ಪೋಷಕರು ದೂರು ದಾಖಲಿಸಿದ್ದಾರೆ. ದೂರಿನನ್ವಯ ಆರೋಪಿ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಘಟನೆ ವಿವರ: ಉತ್ತರ ಪ್ರದೇಶ ಮೂಲದ ಸಲ್ಮಾನ್ ಖುರೇಶಿ, ಸೇಹಿತನನ್ನು ಭೇಟಿಯಾಗುವುದಕ್ಕಾಗಿ ಮುಂಬೈಗೆ ಬಂದಿದ್ದ. ಕಾರಿನಲ್ಲಿ ಕುಳಿತಿದ್ದ ಆರೋಪಿ ಮತ್ತು ಅವನ ಸ್ನೇಹಿತ, ಟ್ಯೂಷನ್ ತರಗತಿ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದರು ಬಾಲಕಿಯರನ್ನು ನೋಡಿದ ತಕ್ಷಣ ಮೂದಲಿಸಲು ಆರಂಭಿಸಿದ್ದರು. ಇದರಿಂದ ಗಾಬರಿಗೊಂಡ ಬಾಲಕಿಯರು ತಕ್ಷಣ ಮನೆಗೆ ತೆರಳುವುದಕ್ಕಾಗಿ ಆಟೊರಿಕ್ಷಾವನ್ನು ಹತ್ತಿದ್ದರು. ಆದರೆ, ಆರೋಪಿಗಳು ಕಾರಿನಲ್ಲಿ ಆಟೊವನ್ನು ಹಿಂಬಾಲಿಸಿದ್ದರು. ಆಟೊ ಟ್ರಾಫಿಕ್‌ ಸಿಗ್ನಲ್‌ನಲ್ಲಿ ನಿಂತಾಗ ಕಾರಿನಿಂದ ಇಳಿದು ಬಂದ ಸಲ್ಮಾನ್, ತನ್ನ ಫೋನ್ ನಂಬರ್‌ ಬರೆದಿರುವ ಒಂದು ಚೀಟಿಯೊಂದನ್ನು ಬಾಲಕಿಗೆ ನೀಡಿದ್ದಾನೆ.

ಪೋಷಕರು ದೂರು ನೀಡಿದ ಕೂಡಲೇ ಫೋನ್ ನಂಬರ್ ಜಾಡು ಹಿಡಿದು ಸಲ್ಮಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಆತನ ಸ್ನೇಹಿತ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT