ಮಂಗಳವಾರ, ಅಕ್ಟೋಬರ್ 27, 2020
23 °C

ನಟ ಮಿಥುನ್‌ ಚಕ್ರವರ್ತಿ ಮಗನ ವಿರುದ್ಧ ಅತ್ಯಾಚಾರ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಿಳೆಯೊಬ್ಬರು ನೀಡಿದ್ದ ಅತ್ಯಾಚಾರ ಹಾಗೂ ವಂಚನೆ ದೂರು ಆಧರಿಸಿ, ಖ್ಯಾತ ನಟ ಮಿಥುನ್‌ ಚಕ್ರವರ್ತಿ ಮಗ ಮಹಾಕ್ಷಯ್‌ ಹಾಗೂ ಮಿಥುನ್‌ ಅವರ ಪತ್ನಿ ಯೋಗಿತಾ ಬಾಲಿ ಅವರ ವಿರುದ್ಧ ಮುಂಬೈ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

38 ವರ್ಷದ ಮಹಿಳೆಯೊಬ್ಬರು ಇವರಿಬ್ಬರ ವಿರುದ್ಧ ಗುರುವಾರ ರಾತ್ರಿ ಓಶಿವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘2015ರಿಂದ 2018ರವರೆಗೆ ಮಹಾಕ್ಷಯ್‌ ಚಕ್ರವರ್ತಿ ನನ್ನ ಜೊತೆ ಸಂಬಂಧ ಹೊಂದಿದ್ದರು. ಮದುವೆಯಾಗುವುದಾಗಿಗೂ ಭರವಸೆ ನೀಡಿದ್ದರು. ಪಶ್ಚಿಮ ಅಂಧೇರಿಯ ಆದರ್ಶ ನಗರದಲ್ಲಿರುವ ಮಹಾಕ್ಷಯ್‌ ಅವರ ಫ್ಲ್ಯಾಟ್‌ಗೆ ತೆರಳಿದ್ದ ಸಂದರ್ಭದಲ್ಲಿ, ಪಾನೀಯದಲ್ಲಿ ಪ್ರಜ್ಞೆ ತಪ್ಪುವ ವಸ್ತುವನ್ನು ಬೆರೆಸಿ ನನಗೆ ನೀಡಿದ್ದರು. ನಂತರದಲ್ಲಿ ನನ್ನ ಜೊತೆಗೆ ದೈಹಿಕ ಸಂಪರ್ಕಕ್ಕೆ ಒತ್ತಡ ಹೇರಿದ್ದರು’ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ. 

‘ಮಹಿಳೆ ಗರ್ಭವತಿಯಾದ ನಂತರ ಆಕೆಗೆ ಗರ್ಭಪಾತ ಮಾಡುವಂತೆ ಹೇಳಿ ಮಾತ್ರೆ ನೀಡಿದ್ದರು ಎಂದು ದೂರು ದಾಖಲಿಸಿದ್ದ ಮಹಿಳೆ ಆರೋಪಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘2018ರಲ್ಲಿ ಮಹಾಕ್ಷಯ್‌ ಅವರ ಜೊತೆ ಮದುವೆಯ ವಿಚಾರ ಪ್ರಸ್ತಾಪಿಸಿದಾಗ ಅದನ್ನು ಅವರು ತಿರಸ್ಕರಿಸಿದ್ದಾರೆ. ಈ ವಿಚಾರ ನಂತರದಲ್ಲಿ ಇಬ್ಬರ ನಡುವೆಯೂ ಜಗಳಕ್ಕೆ ಕಾರಣವಾಗಿತ್ತು. ಒಮ್ಮೆ ಮಹಾಕ್ಷಯ್‌ಗೆ ಕರೆ ಮಾಡಿದ ಸಂದರ್ಭದಲ್ಲಿ ಅವರ ತಾಯಿ ಯೋಗಿತಾ ಬಾಲಿ ಅವರು ಕರೆ ಸ್ವೀಕರಿಸಿ, ನನಗೆ ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. 

‘ಮಹಾಕ್ಷಯ್‌ ಹಾಗೂ ಯೋಗಿತಾ ಅವರ ವಿರುದ್ಧ 2018 ಜೂನ್‌ನಲ್ಲಿ ಬೇಗಂಪುರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಘಟನೆ ನಡೆದ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲೇ ದೂರು ನೀಡಲು 2020 ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್‌ ಮಹಿಳೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ 2020 ಜುಲೈನಲ್ಲಿ ಓಶಿವರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು