ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮಹಾರಾಷ್ಟ್ರದಲ್ಲಿ 55,469 ಪ್ರಕರಣಗಳು, ಮುಂಬೈನಲ್ಲಿ 10,000ಕ್ಕೂ ಅಧಿಕ

Last Updated 6 ಏಪ್ರಿಲ್ 2021, 16:44 IST
ಅಕ್ಷರ ಗಾತ್ರ

ಮುಂಬೈ: ಮಂಗಳವಾರ ಮುಂಬೈನಲ್ಲಿ ಕೋವಿಡ್‌–19 ದೃಢಪಟ್ಟ 10,030 ಹೊಸ ಪ್ರಕರಣಗಳು ದಾಖಲಾಗಿವೆ, ಇದೇ ಅವಧಿಯಲ್ಲಿ 31 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ ನಂತರ 24 ಗಂಟೆಗಳ ಅವಧಿಯಲ್ಲಿ ಅತಿ ಹೆಚ್ಚು ಜನರು ಮೃತಪಟ್ಟಿರುವುದು ದಾಖಲಾಗಿದೆ.

ಬೃಹನ್‌ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಮಾಹಿತಿ ಪ್ರಕಾರ, ಒಟ್ಟು ಪ್ರಕರಣಗಳ ಸಂಖ್ಯೆ 4,72,332ಕ್ಕೆ ಏರಿಕೆಯಾಗಿದ್ದು, 11,828 ಮಂದಿ ಮೃತಪಟ್ಟಿದ್ದಾರೆ. ಈವರೆಗೂ 3,82,004 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರ 7,019 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ 81ಕ್ಕೆ ಇಳಿಕೆಯಾಗಿದೆ.

ಮುಂಬೈನ ಸ್ಲಮ್‌ಗಳು ಹಾಗೂ ಚಾವಲ್‌ಗಳಲ್ಲಿ 73 ಕಂಟೈನ್‌ಮೆಂಟ್‌ ವಲಯಗಳಿವೆ. ಅಧಿಕ ಪ್ರಕರಣಗಳು ಪತ್ತೆಯಾಗಿರುವ 740 ಕಟ್ಟಡಗಳನ್ನು ಸೀಲ್‌ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ 55,469 ಪ್ರರಕಣಗಳು ವರದಿಯಾಗಿದ್ದು, 297 ಮಂದಿ ಸಾವಿಗೀಡಾಗಿದ್ದಾರೆ. ಠಾಣೆಯಲ್ಲಿ 5,287 ಪ್ರಕರಣಗಳು, ನಾಸಿಕ್‌ನಲ್ಲಿ 4,638 ಹಾಗೂ ನಾಗ್ಪುರದಲ್ಲಿ 3,305 ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ 81 ಲಕ್ಷಕ್ಕೂ ಹೆಚ್ಚು ಡೋಸ್‌ ಲಸಿಕೆಯನ್ನು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT