ಬುಧವಾರ, ಏಪ್ರಿಲ್ 21, 2021
23 °C

ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್‌, ಪ್ರಧಾನಿ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯ ತಿಥಿ ದಿನವಾದ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅರ್ಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಷ್ಟ್ರಪತಿ ಅವರು, ‘‌ದೇಶದ ಪರವಾಗಿ ರಾಷ್ಟ್ರಪಿತ
ಮಹಾತ್ಮ ಗಾಂಧೀಜಿ ಅವರಿಗೆ ಗೌರವವನ್ನು ಅರ್ಪಿಸುತ್ತಿದ್ದೇನೆ. ಅವರು ಹುತಾತ್ಮರಾದ ದಿನವನ್ನು ಸ್ಮರಿಸುತ್ತಿದ್ದೇವೆ. ನಾವು ಅವರ ಶಾಂತಿ, ಅಹಿಂಸೆ, ಸರಳತೆ, ಪರಿಶುದ್ಧತೆ ಮತ್ತು ನಮ್ರತೆಯ ತತ್ವಗಳಿಗೆ ಬದ್ಧರಾಗಿರಬೇಕು’ ಎಂದಿದ್ದಾರೆ.

ಮಹಾತ್ಮ ಗಾಂಧೀಜಿ ಅವರ ಆದರ್ಶಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ. ಈ ಹುತಾತ್ಮರ ದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ವೀರ ವನಿತೆಯರು ಹಾಗೂ ಯೋಧರನ್ನು ನೆನಪಿಸಿಕೊಳ್ಳೋಣ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

1948ರ ಜನವರಿ 30ರಂದು ಗಾಂಧೀಜಿ  ಅವರನ್ನು ನಾಥೂರಾಮ ಗೋಡ್ಸೆ ಗುಂಡಿಕ್ಕಿ ಕೊಂದಿದ್ದರು. ದೇಶದೆಲ್ಲೆಡೆ ಗಾಂಧಿಜೀ ಅವರ ಪುಣ್ಯ ತಿಥಿಯ ದಿನವನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು