ಗುರುವಾರ , ಫೆಬ್ರವರಿ 25, 2021
28 °C

ದೇಶದಲ್ಲಿ ಇದುವರೆಗೆ 10.5 ಲಕ್ಷ ಜನರಿಗೆ ಕೋವಿಡ್–19 ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಕೋವಿಡ್–19 ಲಸಿಕೆ ಅಭಿಯಾನದ ಭಾಗವಾಗಿ ಜನವರಿ 22ರ ಬೆಳಿಗ್ಗೆ 7ರ ವರೆಗೆ ಒಟ್ಟು 10.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 2.37 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ ಅತಿಹೆಚ್ಚು ಜನರಿಗೆ ಲಸಿಕೆ
ಲಸಿಕೆ ಅಭಿಯಾನ ಆರಂಭ (ಜ.16) ಆದಾಗಿನಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಒಟ್ಟು 1,38,807 ಜನರು ಲಸಿಕೆ ಪಡೆದಿದ್ದಾರೆ. ಹೀಗಾಗಿ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ಶ್ರೇಯ ರಾಜ್ಯದ್ದಾಗಿದೆ. ಉಳಿದಂತೆ ಆಂಧ್ರಪ್ರದೇಶ (1,15,365), ಒಡಿಶಾ (1,13,623), ತೆಲಂಗಾಣ (97,087), ಬಿಹಾರ (63,541), ಪಶ್ಚಿಮ ಬಂಗಾಳ (53,988), ಮಹಾರಾಷ್ಟ್ರ (52,393), ಹರಿಯಾಣ (45,893), ತಮಿಳುನಾಡು (42,947), ಮಧ್ಯಪ್ರದೇಶ (38,278), ಕೇರಳ (35,173), ಗುಜರಾತ್‌ (34,865), ರಾಜಸ್ಥಾನ (32,379), ಉತ್ತರ ಪ್ರದೇಶ (22,644), ಛತ್ತೀಸಗಢ (22,171), ದೆಹಲಿ (18,844), ಪಂಜಾಬ್‌ (12,532), ಜಾರ್ಖಂಡ್‌ (11,641), ಅಸ್ಸಾಂ (10,676) ರಾಜ್ಯಗಳಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ.

ತ್ರಿಪುರ (9,272), ಉತ್ತರಾಖಂಡ್‌ (8,206), ಜಮ್ಮ–ಕಾಶ್ಮೀರ (6,847), ಹಿಮಾಚಲ ಪ್ರದೇಶ (5,790), ಅರುಣಾ ಪ್ರದೇಶ (4,682), ನಾಗಾಲ್ಯಾಂಡ್‌ (3,187), ಮಿಜೋರಾಂ (2,537), ಮೇಘಾಲಯ (1,785), ಮಣಿಪುರ (1,454), ಅಂಡಮಾನ್‌ ನಿಕೋಬರ್‌(1,032), ಪಾಂಡಿಚೇರಿ (759), ಸಿಕ್ಕಿಂ (773), ಚಂಡೀಗೇ (753), ಗೋವಾ (426), ಲಕ್ಷದ್ವೀಪ (369), ಲಡಾಖ್‌ (240), ದಾದ್ರ ಮತ್ತು ನಗರ ಹವೇಲಿ (184) ಹಾಗೂ ದಮನ್‌ ಮತ್ತು ದಿಯುವಿನಲ್ಲಿ (94) ಕಡಿಮೆ ಜನರು ಲಸಿಕೆ ಸ್ವೀಕರಿಸಿದ್ದಾರೆ.

8 ಲಕ್ಷ ಮಾದರಿ ಪರೀಕ್ಷೆ
ಸೋಂಕು ಪತ್ತೆಗಾಗಿ ಕಳೆದ 24 ಗಂಟೆಗಳಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರೊಂದಿಗೆ ಇದುವರೆಗೆ ಒಟ್ಟು 19 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್–19 ಪರೀಕ್ಷೆ ನಡೆಸಿದಂತಾಗಿದೆ.

ಗುರುವಾರ ಒಂದೇದಿನ ಒಟ್ಟು 18.002 ಸೋಂಕಿತರು ಗುಣಮುಖರಾಗಿದ್ದಾರೆ. ಇದೇ ವೇಳೆ ಹೊಸದಾಗಿ 14,545 ಜನರಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,06,25,428ಕ್ಕೆ ತಲುಪಿದ್ದು, ಇದರಲ್ಲಿ 1.02 ಕೋಟಿ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 1.53 ಲಕ್ಷ ಮಂದಿ ಮೃತಪಟ್ಟಿದ್ದು, ಇನ್ನು 1.88 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು