ಬುಧವಾರ, ಮಾರ್ಚ್ 29, 2023
27 °C

ಸಚಿವ ಮಲಿಕ್‌ಗೆ ಭೂಗತ ಜಗತ್ತಿನ ನಂಟಿನ ಕುರಿತು ಶೀಘ್ರ ಬಹಿರಂಗ: ಫಡಣವಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು, ಮಾದಕ ವಸ್ತುಗಳ ವ್ಯಾಪಾರಿಯ ಫೋಟೊದೊಂದಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರ ಪತ್ನಿ ಅಮೃತಾ ಫಡಣವಿಸ್  ಫೋಟೊ ಸೇರಿಸಿ, ‘ಬಿಜೆಪಿ ಮತ್ತು ಡ್ರಗ್ಸ್‌ ದಂಧೆಕೋರರ ನಡುವಿನ ಸಂಬಂಧ ಚರ್ಚಿಸೋಣ‘  ಎಂದು ಟ್ವೀಟ್ ಮಾಡಿದ್ದಾರೆ.

ಮಲಿಕ್‌ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌, ‘ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ‘ ಎಂದು ಹೇಳಿದ್ದಾರೆ. ‘ದೀಪಾವಳಿ ನಂತರ ಮಲಿಕ್‌ಗೆ ಸಂಬಂಧಿಸಿದ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗೊಳಿಸುತ್ತೇನೆ. ಅದರಲ್ಲಿ ಸಚಿವರಿಗೂ ಭೂಗತಪಾತಕಿಗಳಿಗೂ ಇರುವ ಸಂಬಂಧಗಳನ್ನು ಅನಾವರಣಗೊಳಿಸುತ್ತೇನೆ‘ ಎಂದು ಹೇಳಿದರು.

ಮಾದಕ ವಸ್ತು ನಿಯಂತ್ರಣಾ ಸಂಸ್ಥೆ(ಎನ್‌ಸಿಬಿ) ಗುರಿಯಾಗಿಸಿ ಸರಣಿ ಟ್ವೀಟ್‌ ಮಾಡಿರುವ ಮಲಿಕ್, ಟ್ವೀಟ್‌ಗಳೊಂದಿಗೆ  ಡ್ರಗ್‌ ಪೆಡ್ಲರ್‌ವೊಬ್ಬನ ಜೊತೆ ಅಮೃತಾ ಫಡಣವಿಸ್ ನಿಂತಿರುವ ಫೋಟೊವೊಂದನ್ನು ಲಗತ್ತಿಸಿದ್ದಾರೆ. ಇದೇ ಡ್ರಗ್‌ ಪೆಡ್ಲರ್‌ನೊಂದಿಗೆ ದೇವೇಂದ್ರ ಫಡಣವಿಸ್ ಇರುವ ಫೋಟೊವನ್ನು ಪೋಸ್ಟ್‌ ಮಾಡಿದ್ದಾರೆ. ಅಮೃತ ಅವರ ಫೋಟೊ ಜೊತೆಗೆ, ‘ಡ್ರಗ್ಸ್‌ ದಂಧೆಯೊಂದಿಗಿನ ಬಿಜೆಪಿ ಸಂಬಂಧದ ಕುರಿತು ಈಗ ಚರ್ಚಿಸೋಣ‘ ಎಂದು ಟ್ವೀಟ್‌ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು