ಸೋಮವಾರ, ಜೂನ್ 21, 2021
27 °C

ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರುಕ್‌ ಅಬ್ದುಲ್ಲಾರಿಗೆ ಕೋವಿಡ್-19‌ ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಮತ್ತು ಶ್ರೀನಗರ ಲೋಕಸಭಾ ಕ್ಷೇತ್ರದ ಸದಸ್ಯ ಫಾರುಕ್‌ ಅಬ್ದಲ್ಲಾ ಅವರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಅವರ ಮಗ ಒಮರ್‌ ಅಬ್ದುಲ್ಲಾ ಮಂಗಳವಾರ ತಿಳಿಸಿದರು.

‘ಇತ್ತೀಚೆಗೆ ನನ್ನ ತಂದೆಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ’ ಒಮರ್‌ ಮನವಿ ಮಾಡಿದ್ದಾರೆ.

‘ನನ್ನ ತಂದೆಗೆ ಕೋವಿಡ್‌ 19 ದೃಢವಾಗಿದೆ. ಅವರಿಗೆ ಅದರ ಕೆಲ ಲಕ್ಷಣಗಳೂ ಗೋಚರಿಸಿವೆ’ ಎಂದು ಎನ್‌ಸಿಯ ಉಪಾಧ್ಯಕ್ಷರೂ ಆಗಿರುವ ಒಮರ್‌ ಅಬ್ದುಲ್ಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ನಾನು ಮತ್ತು ನಮ್ಮ ಕುಟುಂಬದವರು ಕೋವಿಡ್‌ ಪರೀಕ್ಷೆಗೆ ಒಳಪಡಲಿದ್ದೇವೆ. ಅಲ್ಲಿಯವರೆಗೆ ನಾವೆಲ್ಲ ಸ್ವಯಂ ಪ್ರತ್ಯೇಕವಾಸದಲ್ಲಿ ಇರುತ್ತೇವೆ. ಕೆಲ ದಿನಗಳಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದವರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು