ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಚೀನಾವನ್ನು ವೈಭವೀಕರಿಸುತ್ತಿರುವ ಸಿಪಿಐಎಂ: ಬಿಜೆಪಿಯ ಮಿತ್ರಪಕ್ಷ ಆರೋಪ

Last Updated 22 ಜನವರಿ 2022, 8:23 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸಲಾಗುತ್ತಿದೆ ಎಂದು ಎನ್‌ಡಿಎ ಮಿತ್ರಪಕ್ಷ ‘ಡೆಮಾಕ್ರಟಿಕ್ ಪಾರ್ಟಿ’ ಆರೋಪಿಸಿದೆ.

‘ಅವರು (ಸಿಪಿಐಎಂ) ದೇಶದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ಅನುಭವಿಸಿಕೊಂಡು ಪಕ್ಷದ ಜಿಲ್ಲಾ ಮಟ್ಟದ ಸಭೆಗಳಲ್ಲಿ ಚೀನಾವನ್ನು ವೈಭವೀಕರಿಸುತ್ತಿದ್ದಾರೆ. ಇದು ದೇಶ ವಿರೋಧಿ ಚಟುವಟಿಕೆಗಿಂತ ಹೊರತಾದದ್ದಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಾರ್ಜ್ ಸೆಬಾಸ್ಟಿಯನ್ ಹೇಳಿದ್ದಾರೆ.

‘ಚೀನಾವನ್ನು ಹೊಗಳಲು ಆ ದೇಶದಿಂದ ಅವರಿಗೆ (ಸಿಪಿಐಎಂ) ಹಣಕಾಸು ನೆರವು ದೊರೆಯುತ್ತಿದೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಚೀನಾ ಕುರಿತ ನಿಲುವು ಏನೆಂಬುದನ್ನು ಬಹಿರಂಗಪಡಿಸುವಂತೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಕಳೆದ ವಾರ ಸಿಪಿಐ(ಎಂ) ಅನ್ನು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT