ಭಾನುವಾರ, ಮಾರ್ಚ್ 7, 2021
32 °C

ನೇಪಾಳ ವಿದೇಶಾಂಗ ಸಚಿವರಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭೇಟಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಪ್ರವಾಸದಲ್ಲಿರುವ ನೇಪಾಳ ವಿದೇಶಾಂಗ ಸಚಿವ ಪ್ರದೀಪಕುಮಾರ್‌ ಗ್ಯಾವಲಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಶನಿವಾರ ಭೇಟಿಯಾಗಿದ್ದಾರೆ.

ಭಾರತ ಮತ್ತು ನೇಪಾಳದ ನಡುವೆ ಗಡಿ ವಿಷಯವಾಗಿ ಸೃಷ್ಟಿಯಾಗಿರುವ ವಿವಾದವು ಎರಡೂ ದೇಶಗಳ ಸಚಿವರ ಮಟ್ಟದ ಸಭೆಯಲ್ಲಿ ಚರ್ಚೆಯಾಗುವ ಸಂಭವವಿದೆ.

ಭಾರತದ ಕೆಲವು ಪ್ರದೇಶಗಳು ತನಗೆ ಸೇರಿದವು ಎಂದು ಹೇಳಿಕೊಂಡ ನೇಪಾಳ, ಆ ಪ್ರದೇಶಗಳನ್ನು ಒಳಗೊಂಡ ಹೊಸ ಭೂಪಟವನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಭಾರತದ ಭೂಪ್ರದೇಶಗಳನ್ನು ಹೊಂದಿರುವ ರಾಜಕೀಯ ಭೂಪಟದ ಪರಿಷ್ಕರಣೆಗೆ ಅಗತ್ಯವಾಗಿರುವ ಸಾಂವಿಧಾನಿಕ ತಿದ್ದುಪಡಿಗೆ ನೇಪಾಳದ ಸಂಸತ್ತು ಅನುಮೋದನೆಯನ್ನೂ ನೀಡಿತ್ತು. ಈ ಬಗ್ಗೆ ಭಾರತ ಪ್ರತಿಭಟನೆ ದಾಖಲಿಸಿತ್ತು.

ನೇಪಾಳದೊಂದಿಗಿನ ಬಾಂಧವ್ಯದ ತಪ್ಪು ತಿಳಿವಳಿಕೆಯನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಭಾವಿಸಿರುವುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಈ ಹಿಂದೆ ಹೇಳಿದ್ದರು.

’ನಮ್ಮ ಬಾಂಧವ್ಯ ಕೇವಲ ಐತಿಹಾಸಿಕ, ಸಾಂಸ್ಕೃತಿಕ ಮಾತ್ರವಲ್ಲ ಬಾಂಧವ್ಯಕ್ಕೆ ಆಧ್ಯಾತ್ಮಕ ಬೆಸುಗೆಯೂ ಇದೆ. ಇದನ್ನು ಭಾರತ ಎಂದಿಗೂ ಮರೆಯುವುದಿಲ್ಲ' ಎಂದ ಅವರು ಭಾರತ–ನೇಪಾಳ ಸಂಬಂಧಕ್ಕೆ ಧಕ್ಕೆಯಾಗಲು ಹೇಗೆ ಸಾಧ್ಯ ಎಂದು ರಾಜನಾಥ್‌ ಸಿಂಗ್‌ ಪ್ರಶ್ನಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು