ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾನೂನುಗಳ ಲಾಭ ಮುಂದಿನ ದಿನಗಳಲ್ಲಿ ಅನುಭವಕ್ಕೆ ಬರಲಿದೆ: ಪ್ರಧಾನಿ ಮೋದಿ

Last Updated 30 ನವೆಂಬರ್ 2020, 15:44 IST
ಅಕ್ಷರ ಗಾತ್ರ

ವಾರಾಣಸಿ: ತಮ್ಮ ಸರ್ಕಾರದ ಹೊಸ ಕೃಷಿ ಕಾನೂನುಗಳು ರೈತರಿಗೆ ಅಧಿಕಾರ ನೀಡಿವೆ ಮತ್ತು ಅವರಿಗೆ ಹೊಸ ಆಯ್ಕೆಗಳು ಹಾಗೂ ಕಾನೂನು ರಕ್ಷಣೆ ನೀಡಿದೆ. ಈ ಹೊಸ ಕಾನೂನುಗಳ ಪ್ರಯೋಜನಗಳನ್ನು ಮುಂದಿನ ದಿನಗಳಲ್ಲಿ ಅನುಭವಿಸಲು ಸಿಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು.

ರಾಷ್ಟ್ರೀಯ ಹೆದ್ದಾರಿ 19 ರ ಆರು ಪಥಗಳ ಅಗಲವಾದ ಹಂಡಿಯಾ (ಪ್ರಯಾಗರಾಜ್) -ರಾಜತಾಲಾಬ್ (ವಾರಣಾಸಿ) ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ,ವಾರಣಾಸಿಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು

'ಭಾರತದ ಕೃಷಿ ಉತ್ಪನ್ನಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಈ ದೊಡ್ಡ ಮಾರುಕಟ್ಟೆ ಮತ್ತು ಹೆಚ್ಚಿನ ಬೆಲೆಗಳಿಗೆ ರೈತರಿಗೆ ಪ್ರವೇಶವಿರಬೇಕಲ್ಲವೇ? ಒಬ್ಬ ರೈತನು ತನ್ನ ಉತ್ಪನ್ನಗಳನ್ನು ಉತ್ತಮ ಬೆಲೆ ಮತ್ತು ಸೌಲಭ್ಯಗಳನ್ನು ನೀಡುವವರಿಗೆ ನೇರವಾಗಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಪಡೆಯಬಾರದೇ. ಯಾರಾದರೂ ಹಳೆಯ ವ್ಯವಸ್ಥೆಯಿಂದ ಮಾತ್ರವೇ ವಹಿವಾಟು ನಡೆಸುವುದನ್ನು ಪರಿಗಣಿಸಿದರೆ, ಅದನ್ನು ಎಲ್ಲಿ ನಿಲ್ಲಿಸಲಾಗಿದೆ? ಎಂದರು.

'ಈ ಮೊದಲು, ಮಾರುಕಟ್ಟೆಯ ಹೊರಗಿನ ವಹಿವಾಟುಗಳು ಕಾನೂನುಬಾಹಿರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಸಣ್ಣ ರೈತರು ಮೋಸ ಹೋಗುತ್ತಿದ್ದರು. ಈಗ ಸಣ್ಣ ರೈತರೂ ಕೂಡ ಮಾರುಕಟ್ಟೆಯಿಂದ ಹೊರಗಿನ ಪ್ರತಿಯೊಂದು ಒಪ್ಪಂದದ ಬಗ್ಗೆಯೂ ಕಾನೂನು ಕ್ರಮ ತೆಗೆದುಕೊಳ್ಳಬಹುದು. ದೊಡ್ಡ ಮಾರುಕಟ್ಟೆಗೆ ಆಯ್ಕೆಗಳನ್ನು ನೀಡುವ ಮೂಲಕ ರೈತರಿಗೆ ಅಧಿಕಾರ ನೀಡಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಇದು ಅವರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ' ಎಂದು ತಿಳಿಸಿದ್ದಾರೆ.

'ರೈತರ ಅನುಕೂಲಕ್ಕಾಗಿ ಹೊಸ ಕೃಷಿ ಕಾನೂನುಗಳನ್ನು ತರಲಾಗಿದೆ. ಮುಂಬರುವ ದಿನಗಳಲ್ಲಿ ಈ ಹೊಸ ಕಾನೂನುಗಳ ಪ್ರಯೋಜನಗಳನ್ನು ನಾವು ನೋಡುತ್ತೇವೆ ಮತ್ತು ಅನುಭವಿಸುತ್ತೇವೆ'. ಹೊಸ ಕೃಷಿ ಕಾನೂನು ಹಳೆಯ ವ್ಯವಸ್ಥೆಯ ಪ್ರಕಾರ ಉತ್ಪನ್ನಗಳನ್ನು ಮಾರಾಟ ಮಾಡಲು ಇಚ್ಛಿಸುವವರನ್ನು ತಡೆಯುವುದಿಲ್ಲ. ಈ ಮೊದಲು, ಮಂಡಿಯಿಂದ ಹೊರಗಿನ ಯಾವುದೇ ಮಾರಾಟವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿತ್ತು ಮತ್ತು ಸಣ್ಣ ರೈತರು ಮಂಡಿಯನ್ನು ತಲುಪಲು ಸಾಧ್ಯವಾಗದೆ ಮೋಸ ಹೋಗಿದ್ದರು. ಮೋಸ ಮತ್ತು ವಂಚನೆಯ ವಿರುದ್ಧ ರೈತರನ್ನು ಈಗ ಕಾನೂನಿನಿಂದ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಮಾಡಿದ ನೀತಿಗಳು ಮತ್ತು ಕಾನೂನುಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಸಹಜ ಮತ್ತು ಇದು ಪ್ರಜಾಪ್ರಭುತ್ವದ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು.

ಈ ಹಿಂದೆ ಸರ್ಕಾರದ ನಿರ್ಧಾರಗಳನ್ನು ಯಾರಾದರೂ ಇಷ್ಟಪಡದಿದ್ದರೆ, ಅದನ್ನು ವಿರೋಧಿಸುತ್ತಿದ್ದರು. ಆದರೆ ಈಗ ಹೊಸ ಪ್ರವೃತ್ತಿ ಇದೆ.ಈಗ ವದಂತಿಗಳೇ ಪ್ರತಿಪಕ್ಷಗಳಿಗೆ ಆಧಾರವಾಗಿವೆ ಎಂದು ನಾವು ಕೆಲ ಸಮಯದಿಂದ ನೋಡುತ್ತಿದ್ದೇವೆ. ನಿರ್ಧಾರವು ಸರಿಯಾಗಿದ್ದರೂ, ಅದು ಆಗದ ಅಥವಾ ಎಂದಿಗೂ ಸಂಭವಿಸದ ವಿಚಾರಗಳ ಕುರಿತು ಇತರ ಪರಿಣಾಮಗಳಿಗೆ ಕಾರಣವಾಗುತ್ತದೆ ಎನ್ನುವ ಪ್ರಚಾರ ಹರಡಿದೆ. ಕೃಷಿ ಕಾನೂನಿನ ವಿಚಾರದಲ್ಲೂ ಹೀಗೆ ಆಗಿದೆ. ಅದರ ಹಿಂದೆ ದಶಕಗಳಿಂದ ಸತತವಾಗಿ ರೈತರನ್ನು ಮೋಸಗೊಳಿಸಿದವರೇ ಇದ್ದಾರೆ ಎಂದು ದೂರಿದರು.

ಈ ಹಿಂದೆ ಎಂಎಸ್‌ಪಿಯನ್ನು ಘೋಷಿಸಲಾಗುತ್ತಿತ್ತು. ಆದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿಯಲ್ಲಿ ಬಹಳ ಕಡಿಮೆ ಖರೀದಿಸಲಾಗಿದೆ. ಎಂಎಸ್‌ಪಿ ಹೆಸರಿನಲ್ಲಿ ವರ್ಷಗಳಿಂದ ರೈತರಿಗೆ ಮೋಸ ಮಾಡಲಾಯಿತು. ರೈತರ ಹೆಸರಿನಲ್ಲಿ ದೊಡ್ಡ ಸಾಲ ಮನ್ನಾ ಪ್ಯಾಕೇಜ್‌ಗಳನ್ನು ಘೋಷಿಸಲಾಯಿತು. ಆದರೆ ಅದು ಸಣ್ಣ ಮತ್ತು ಅತಿಸಣ್ಣ ರೈತರನ್ನು ತಲುಪಲಿಲ್ಲ. ರೈತರ ಹೆಸರಿನಲ್ಲಿ ದೊಡ್ಡ ಯೋಜನೆಗಳನ್ನು ಘೋಷಿಸಲಾಯಿತು. ಅದು ಕೂಡ ಅವರಿಗೆ ಲಾಭ ತಂದುಕೊಡಲಿಲ್ಲ. ನೀವು ನೆನಪಿಟ್ಟುಕೊಳ್ಳಬೇಕು,ಇವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದರು ಎಂದು ಪ್ರದಾನಿ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT