#HappyNewYear2021: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಹೊಸವರ್ಷದ ಶುಭಾಶಯ

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಹೊಸ ವರ್ಷದ ಶುಭಕೋರಿದ್ದಾರೆ.
ರಾಷ್ಟ್ರಪತಿ ಕೋವಿಂದ್, ‘ಎಲ್ಲರಿಗೂ ಹೊಸವರ್ಷದ ಶುಭಾಶಯಗಳು. ಹೊಸ ಆರಂಭ ಮಾಡಲು, ವೈಯಕ್ತಿಕ ಮತ್ತು ಸಾಮೂಹಿಕ ಅಭಿವೃದ್ಧಿಗೆ ನೆರವಾಗಲು ಹೊಸವರ್ಷವು ಅವಕಾಶ ಮಾಡಿಕೊಡುತ್ತದೆ. ಕೋವಿಡ್–19 ಸನ್ನಿವೇಶದಲ್ಲಿ ಎದುರಾದ ಸವಾಲುಗಳು, ಒಗ್ಗಟ್ಟಿನೊಂದಿಗೆ ಮುನ್ನಡೆಯುವ ನಮ್ಮ ಸಂಕಲ್ಪವನ್ನು ಬಲಪಡಿಸಿವೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Happy New Year everyone!
New Year provides an opportunity to make a fresh beginning and resolve for individual and collective development.
Challenges arising out of COVID-19 situation strengthen our determination to move forward unitedly.
— President of India (@rashtrapatibhvn) January 1, 2021
‘ನಿಮಗೆ 2021ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತಸ ಮತ್ತು ಸಮೃದ್ಧಿ ತರಲಿ. ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಮೇಲುಗೈ ಸಾಧಿಸಲಿ’ ಎಂದು ಪ್ರಧಾನಿ ಮೋದಿ ಶುಭಕೋರಿದ್ದಾರೆ.
Wishing you a happy 2021!
May this year bring good health, joy and prosperity.
May the spirit of hope and wellness prevail.
— Narendra Modi (@narendramodi) January 1, 2021
‘ಹೊಸ ವರ್ಷದ ಆರಂಭವಾಗುತ್ತಿರುವಂತೆಯೇ ನಾವು ಕಳೆದುಕೊಂಡವನ್ನು ನೆನಪಿಸಿಕೊಳ್ಳುತ್ತಾ, ನಮಗಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಧನ್ಯವಾದಗಳನ್ನು ಹೇಳೋಣ. ನನ್ನ ಹೃದಯವು ಅನ್ಯಾಯದ ಶಕ್ತಿಗಳ ವಿರುದ್ಧ ಗೌರವ ಮತ್ತು ಘನತೆಯಿಂದ ಹೋರಾಟ ನಡೆಸುವ ರೈತರು ಮತ್ತು ಕಾರ್ಮಿಕರ ಜೊತೆಗಿದೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
As the new year begins, we remember those who we lost and thank all those who protect and sacrifice for us.
My heart is with the farmers and labourers fighting unjust forces with dignity and honour.
Happy new year to all. pic.twitter.com/L0esBsMeqW
— Rahul Gandhi (@RahulGandhi) December 31, 2020
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ‘ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ, ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ’ ಎಂದು ಕರೆ ನೀಡಿದ್ದಾರೆ.
ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ, ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ. pic.twitter.com/Yluw0ow1et
— B.S. Yediyurappa (@BSYBJP) December 31, 2020
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜನತೆಯ ಬೇನೆ, ಬೇಸರ, ಸಂಕಷ್ಟಗಳು ದೂರವಾಗಲಿ. ಸುಖ-ಸಂತೋಷ-ಆರೋಗ್ಯ ಬದುಕಾಗಲಿ. ಜನತಂತ್ರವು ಉಳಿಯಲಿ ಬೆಳೆಯಲಿ. ಹೊಸ ವರ್ಷ ಸರ್ವರ ಬಾಳಲ್ಲಿ ಶಾಂತಿ, ನೆಮ್ಮದಿ ಬೆಳಗಲಿ’ ಎಂದು ಹಾರೈಸಿದ್ದಾರೆ.
ಜನತೆಯ ಬೇನೆ,ಬೇಸರ, ಸಂಕಷ್ಟಗಳು ದೂರವಾಗಲಿ
ಸುಖ-ಸಂತೋಷ-ಆರೋಗ್ಯ ಬದುಕಾಗಲಿ
ಜನತಂತ್ರವು ಉಳಿಯಲಿ ಬೆಳೆಯಲಿಹೊಸ ವರ್ಷ ಸರ್ವರ ಬಾಳಲ್ಲಿ ಶಾಂತಿ,ನೆಮ್ಮದಿ ಬೆಳಗಲಿ. pic.twitter.com/SZxpWqKieE
— Siddaramaiah (@siddaramaiah) January 1, 2021
‘2020 ಕೊರೋನಾ ಸಂಕಷ್ಟದಿಂದ ನಲುಗಿದ ವರ್ಷ, ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ ಎಂದು ಧೀಶಕ್ತಿಯೇ ಆಗಿರುವ ಪ್ರಕೃತಿಯಲ್ಲಿ ಪ್ರಾರ್ಥಿಸುತ್ತೇನೆ. ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2021 ಹೊಸ ವರ್ಷವು ಎಲ್ಲರ ಬದುಕಿನಲಿ ಕಷ್ಟಗಳ ಕಳೆದು ಹೊಸತನವ ತರಲಿ. ಎಲ್ಲರ ಆರೋಗ್ಯ ಚೇತನಮಯವಾಗಲಿ’ ಎಂದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಆಶಿಸಿದ್ದಾರೆ.
2020 ಕೊರೋನಾ ಸಂಕಷ್ಟದಿಂದ ನಲುಗಿದ ವರ್ಷ, ಮನುಕುಲ ಬಸವಳಿದ ಈ ದಿನಗಳು ಇಂದಿಗೆ ಕೊನೆಗೊಳ್ಳಲಿ ಎಂದು ಧೀಶಕ್ತಿಯೇ ಆಗಿರುವ ಪ್ರಕೃತಿಯಲ್ಲಿ ಪ್ರಾರ್ಥಿಸುತ್ತೇನೆ.
ನಾಡಿನ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2021 ಹೊಸ ವರ್ಷವು ಎಲ್ಲರ ಬದುಕಿನಲಿ ಕಷ್ಟಗಳ ಕಳೆದು ಹೊಸತನವ ತರಲಿ. ಎಲ್ಲರ ಆರೋಗ್ಯ ಚೇತನಮಯವಾಗಲಿ.#HappyNewYear2021
— H D Kumaraswamy (@hd_kumaraswamy) December 31, 2020
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ‘ಹೊಸ ವರ್ಷವನ್ನು ಸ್ವಾಗತಿಸುವ ಜೊತೆಗೆ, ನಮ್ಮನ್ನು ರಕ್ಷಿಸುತ್ತಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಧನ್ಯವಾದಗಳನ್ನು ಹೇಳೋಣ. ಕಳೆದ ವರ್ಷ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗಾಗಿ ಪ್ರಾರ್ಥಿಸೋಣ. ಹೊಸ ವರ್ಷವು ಶಾಂತಿ ಮತ್ತು ಧೈರ್ಯವನ್ನು ತರಲಿ’ ಎಂದು ಟ್ವೀಟ್ ಮಾಡಿದ್ದಾರೆ.
नए साल का स्वागत करते हुए आइए सभी स्वास्थ्यकर्मियों, डॉक्टरों का शुक्रिया अदा करें जो आगे रहकर हमारी रक्षा कर रहे हैं और यह प्रार्थना करें कि बीते साल जिन लोगों ने अपने प्रियजनों को खोया है उनके जीवन में और हम सब के जीवन में, नया साल शांति और साहस लेकर आए ।
photo @raihanrvadra pic.twitter.com/VNQjbJqHWL
— Priyanka Gandhi Vadra (@priyankagandhi) January 1, 2021
ನಟರಾದ ಪುನೀತ್ ರಾಜ್‌ಕುಮಾರ್, ದರ್ಶನ್ ಅವರೂ ಹೊಸವರ್ಷಕ್ಕೆ ಶುಭಕೋರಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. Happy New Year 2021 ✨#HappyNewYear2021 pic.twitter.com/gVtUkSrFu4
— Puneeth Rajkumar (@PuneethRajkumar) January 1, 2021
ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ.
ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು pic.twitter.com/o2yLDzoTNM
— Darshan Thoogudeepa (@dasadarshan) January 1, 2021
T 3769 - Greetings and wishes for the year of 2021 ..
वर्ष नव , हर्ष नव ; जीवन उत्कर्ष नव ! pic.twitter.com/WThh43QxDv— Amitabh Bachchan (@SrBachchan) December 31, 2020
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.