ಶನಿವಾರ, ಫೆಬ್ರವರಿ 27, 2021
30 °C

ತಮಿಳುನಾಡಿನಲ್ಲಿ "ಶಹಾದತ್ ಈಸ್ ಅವರ್ ಗೋಲ್" ಉಗ್ರ ಸಂಘಟನೆಯ ಸಕ್ರಿಯ ಸದಸ್ಯನ ಬಂಧನ

ಪಿಿಟಿಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಶರಿಯಾ ಸ್ಥಾಪನೆಯ ಭಾಗವಾಗಿ ದಕ್ಷಿಣದ ರಾಜ್ಯಗಳಲ್ಲಿ ಹಿಂಸಾತ್ಮಕ ‘ಜಿಹಾದ್’ ಗಲಭೆ ಸೃಷ್ಟಿಯಲ್ಲಿ ಭಾಗಿಯಾಗಿರುವ ಆರೋಪದಡಿ ತಮಿಳುನಾಡಿನ "ಜಿಹಾದಿ" ಗ್ಯಾಂಗ್‌ "ಶಹಾದತ್ ಈಸ್ ಅವರ್ ಗೋಲ್" ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯನನ್ನು ಎನ್‌ಐಎ ಗುರುವಾರ ಬಂಧಿಸಿದೆ.

25 ವರ್ಷದ ಮೊಹಮ್ಮದ್ ರಶೀದ್ ಬಂಧಿತ ಆರೋಪಿಯಾಗಿದ್ದು, ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಬಳಿಕ, ಚೆನ್ನೈನ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಎನ್ಐಎ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

2018ರ ಏಪ್ರಿಲ್‌ನಲ್ಲಿ ಕೀಲಕರೈಯಿಂದ ಮೊಹಮ್ಮದ್ ರಿಫಾಸ್, ಮುಪಾರಿಶ್ ಅಹಮದ್ ಮತ್ತು ಅಬುಪಕ್ಕರ್ ಸಿಥಿಕ್ ಅವರನ್ನು ಬಂಧಿಸಿದ ನಂತರ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳ (ನಿಗ್ರಹ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಕ್ತಾರರು ತಿಳಿಸಿದ್ದಾರೆ.

"ಶಹಾದತ್ ನಮ್ಮ ಗುರಿ" ಎಂಬ ಭಯೋತ್ಪಾದಕ ಗ್ಯಾಂಗ್‌ಗೆ ಸಂಬಂಧಿಸಿದ ಕರಪತ್ರಗಳು, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ಇತರ ಆರೋಪಿಗಳಾದ ಶೇಕ್ ದಾವೂದ್, ಅಹಮದ್ ಇಮಿತ್ಯಾಶ್, ಹಮೀದ್ ಅಸ್ಫರ್, ಲಿಯಾಕತ್ ಅಲಿ, ಸಾಜಿತ್ ಅಹಮದ್ ಮತ್ತು ರಿಜ್ವಾನ್ ಮೊಹಮ್ಮದ್ ಅವರನ್ನು ಸಹ ತನಿಖೆಯ ವೇಳೆ ಬಂಧಿಸಲಾಗಿದ್ದು, ನಂತರ 2019 ರ ಜನವರಿಯಲ್ಲಿ ಎನ್‌ಐಎ ಪ್ರಕರಣವನ್ನು ಮರು ದಾಖಲಿಸಿದೆ ಎಂದು ಅವರು ಹೇಳಿದರು.

ಮೇ 2019 ರಲ್ಲಿ ಆರೋಪಿಗಳು ನೆಲೆಸಿದ್ದ ಸ್ಥಳದಲ್ಲಿ ಎನ್‌ಐಎ ಶೋಧ ನಡೆಸಿದ್ದು, ರಶೀದ್‌ನನ್ನು ಭಯೋತ್ಪಾದಕ ಗ್ಯಾಂಗ್‌ನ ಸಕ್ರಿಯ ಸದಸ್ಯ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಉಗ್ರರ ಬಳಿ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳು ಮತ್ತು ಅವರ ಇ-ಮೇಲ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಡೇಟಾ ಪರಿಶೀಲಿಸಿದಾಗ, ರಶೀದ್ ಸೇರಿದಂತೆ ಆರೋಪಿಗಳು ದಾವೂದ್ ಮತ್ತು ರಿಫಾಸ್ ನಾಯಕತ್ವದಲ್ಲಿ " ಶರಿಯಾ  (ಇಸ್ಲಾಮಿಕ್ ಕಾನೂನು) ಸ್ಥಾಪಿಸುವ ಪ್ರಯತ್ನಗಳ ಭಾಗವಾಗಿ ತಮಿಳುನಾಡಿನಲ್ಲಿ ‘ಜಿಹಾದ್’ ಹಿಂಸಾತ್ಮಕ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಅನೇಕ ಪಿತೂರಿ ಸಭೆಗಳನ್ನು ನಡೆಸಿರುವುದು ತಿಳಿದುಬಂದಿದೆ .ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.

ಬಂಧಿತ ಆರೋಪಿ ಸಂಚಿನ ಭಾಗವಾಗಿ ಅಕ್ರಮ ಬಂದೂಕುಗಳನ್ನು ಖರೀದಿಸಲು ಸಹ ಪ್ರಯತ್ನಿಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು