ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾಳವನ್ನು 19ನೇ ಶತಮಾನಕ್ಕೆ ಎಳೆದೊಯ್ದ ಮಮತಾ: ರಾಜನಾಥ್ ಸಿಂಗ್

Last Updated 25 ಮಾರ್ಚ್ 2021, 15:45 IST
ಅಕ್ಷರ ಗಾತ್ರ

ಜಾಯ್‌ಪುರ(ಪ.ಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯವನ್ನು 19ನೇ ಶತಮಾನಕ್ಕೆ ಏಳೆದೊಯ್ದಿದ್ದು, ಕಳೆದ 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.

ಹಿಂದಿನ ಎಡರಂಗ ಸರ್ಕಾರದಂತೆಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಜನತೆಗೆ ಅನ್ಯಾಯ ಮಾಡಿದೆ ಎಂದು ರಾಜನಾಥ್ಆರೋಪಿಸಿದ್ದಾರೆ.

ಪುರುಲಿಯಾ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಉತ್ತಮ ಆಡಳಿತ ನೀಡಲಿದ್ದು, ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.

ಟಿಎಂಸಿ ಅಧ್ಯಕ್ಷೆ ಹಿಂಸಾಚಾರದ ಕೃತ್ಯಗಳನ್ನು ಉತ್ತೇಜಿಸುವ ಭಾಷಣಗಳನ್ನು ಮಾಡುತ್ತಾರೆ. ಬೇರೆ ರಾಜ್ಯಗಳಿಂದ ಬಂದ ಜನರನ್ನು 'ಹೊರಗಿನವರು' ಎಂದು ಪದೇ ಪದೇ ಹೇಳುವ ಮೂಲಕ ದೇಶವನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ರಾಜ್ಯದ (ಬಂಗಾಳದ) ಜನರನ್ನು ಹೊರಗಿನವರೆಂದು ಪರಿಗಣಿಸಲಾಗುತ್ತದೆಯೇ ? ದೇಶದ ಮಣ್ಣಿನಲ್ಲಿ ಜನಿಸಿದ ಎಲ್ಲರೂ ಪರಸ್ಪರ ಭಾತೃತ್ವವನ್ನು ಹೊಂದಿದ್ದಾರೆ ಎಂದು ಹೇಳಿದರು.

ಒಂದು ಪಕ್ಷಕ್ಕೆ (ಬಿಜೆಪಿ) ಸೇರಿದವರು ಹೊರಗಿನವರಾದರೆ ಬಂಗಾಳವನ್ನು ದೋಚಿದ ನೀವು (ಟಿಎಂಸಿ) ಒಳಗಿನವರಾಗಲು ಹೇಗೆ ಸಾಧ್ಯ? ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬದಲು ಬಂಗಾಳ ಮುಖ್ಯಮಂತ್ರಿ ಅಸಂಬದ್ಧ ಟೀಕೆಗಳನ್ನು ಮಾಡುತ್ತಾರೆ. ಈ ರಾಜ್ಯದಲ್ಲಿ ತಾಯಿ, ತಾಯ್ನಾಡು ಮತ್ತು ಜನರು ಸುರಕ್ಷಿತ ಎನ್ನುವ ಭಾವನೆಯನ್ನು ಹೊಂದಿಲ್ಲ ಎಂದು ಆರೋಪಿಸಿದರು.

ರಾಜ್ಯದ ಜನತೆ ಎದುರಿಸುತ್ತಿರುವ ಜಲ ಬಿಕ್ಕಟ್ಟನ್ನು ರಾಜನಾಥ್ ಸಿಂಗ್ ಬೊಟ್ಟು ಮಾಡಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ 2024ರ ಅಂತ್ಯದ ವೇಳೆಗೆ ದೇಶದ ಪ್ರತಿಯೊಂದು ಮನೆಗೂ ನಲ್ಲಿ ನೀರು ಸೌಲಭ್ಯ ಲಭ್ಯವಾಗಲಿದೆಯೆಂಬ ಭರವಸೆ ನೀಡಿದ್ದಾರೆ ಎಂದು ಉಚ್ಛರಿಸಿದರು.

ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ ಎಂದುಸಿಂಗ್ ಆರೋಪಿಸಿದರು. ಬಂಗಾಳದಲ್ಲಿ ಬಾಂಬ್ ತಯಾರಿಕಾ ಕಾರ್ಖಾನೆಗಳು ಬಹಿರಂಗವಾಗಿ ನಡೆಯುತ್ತಿದೆ. ಬಿಜೆಪಿಗೆ ಬಂಗಾಳದಲ್ಲಿ ಸರ್ಕಾರ ನಡೆಸಲು ಅವಕಾಶ ಸಿಕ್ಕರೆ ಕೇವಲ ಕೇಸರಿ ಕಾರ್ಯಕರ್ತರಿಗೆ ಮಾತ್ರವಲ್ಲದೆ ಕಾಂಗ್ರೆಸ್, ಟಿಎಂಸಿ ಹಾಗೂ ಎಡರಂಗ ಕಾರ್ಯಕರ್ತರಿಗೂ ರಕ್ಷಣೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಅದೇ ಹೊತ್ತಿಗೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 200ಕ್ಕೂ ಹೆಚ್ಚುಸ್ಥಾನಗಳ ಬಹುಮತದೊಂದಿಗೆ ಬಿಜೆಪಿ ವಿಜಯಗಳಿಸಲಿದೆ ಎಂದು ಭವಿಷ್ಯ ನುಡಿದರು.

ಇದನ್ನೂ ಓದಿ:

ಜನರಲ್ಲಿ ದ್ವೇಷವನ್ನು ಸೃಷ್ಟಿಸುವ ಪಕ್ಷ ಬಿಜೆಪಿಯಲ್ಲ. ಆದರೆ ಟಿಎಂಸಿ ನಾಯಕಿ, ಕೋಮುವಾದದ ಮೂಲಕ ಬಂಗಾಳವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಧರ್ಮದ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಅಂತಹ ಕೃತ್ಯಗಳಿಗೆ ಭಾಗಿಯಾಗುವ ಪ್ರತಿಯೊಬ್ಬನನ್ನು ಶಿಕ್ಷಿಸುತ್ತದೆ. ಬಂಗಾಳದಲ್ಲಿ ದುರ್ಗಾ ಪೂಜೆ ಅಥವಾ ಸರಸ್ವತಿ ಪೂಜೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT