ನವದೆಹಲಿ: ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್ ಖರೀದಿಸಬೇಕಾಗಿಲ್ಲ. ಆದರೆ, ಪ್ರತ್ಯೇಕ ಬರ್ತ್ (ಸೀಟು) ಬೇಕು ಎಂದಾದರೆ, ಟಿಕೆಟ್‌ನ ಪೂರ್ತಿ ಹಣ ಪಾವತಿಸಬೇಕು ಎಂದು ರೈಲ್ವೆ ಇಲಾಖೆ ಬುಧವಾರ ಸ್ಪಷ್ಟಪಡಿಸಿದೆ.

‘ಐದು ವರ್ಷಗಳ ಒಳಗಿನ ಮಕ್ಕಳ ಟಿಕೆಟ್ ಖರೀದಿ ನಿಯಮದಲ್ಲಿ ಬದಲಾವಣೆಯಾಗಿದೆ. ಐದು ವರ್ಷದ ಒಳಗಿನ ಮಕ್ಕಳಿಗೂ ಟಿಕೆಟ್ ಖರೀದಿಸಬೇಕು ಎಂದು ಇಲಾಖೆ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಐದು ವರ್ಷದ ಒಳಗಿನ ಮಕ್ಕಳಿಗೆ ಟಿಕೆಟ್ ಖರೀದಿ ಸಂಬಂಧ ಯಾವ ನಿಯಮವೂ ಬದಲಾಗಿಲ್ಲ’ ಎಂದು ಇಲಾಖೆ ಹೇಳಿದೆ.

‘ಐದು ವರ್ಷದ ಮಕ್ಕಳಿಗೆ ಟಿಕೆಟ್ ಖರೀದಿಸಬೇಕಾಗಿಲ್ಲ. ಈ ಮಕ್ಕಳಿಗಾಗಿ ಪ್ರತ್ಯೇಕ ಬರ್ತ್ ನೀಡುವುದಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆಯು 2020ರ ಮಾರ್ಚ್ 6ರಂದು ಸೂತ್ತೋಲೆ ಹೊರಡಿಸಿತ್ತು. ಪ್ರತ್ಯೇಕ ಬರ್ತ್ ಬೇಕು ಎಂದಾದರೆ, ದೊಡ್ಡವರಿಗೆ ಇರುವ ಟಿಕೆಟ್ ದರವನ್ನೇ ಪಾವತಿ ಮಾಡಬೇಕು’ ಎಂದೂ ಸುತ್ತೋಲೆಯಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.