ಬುಧವಾರ, ಸೆಪ್ಟೆಂಬರ್ 22, 2021
28 °C

ರಾಮದೇವ್‌ ಮೇಲೆ ದ್ವೇಷವಿಲ್ಲ, ಮಾತು ಹಿಂಪಡೆದರೆ ಕೇಸ್‌ ವಾಪಸ್: ಐಎಂಎ ಮುಖ್ಯಸ್ಥ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-19 ಲಸಿಕೆ ಮತ್ತು ಆಧುನಿಕ ಔಷಧ ಪದ್ಧತಿಯ ವಿರುದ್ಧದ ತಮ್ಮ ಹೇಳಿಕೆಗಳನ್ನು ಯೋಗ ಗುರು ಬಾಬಾ ರಾಮದೇವ್‌ ಅವರು ಹಿಂದಕ್ಕೆ ಪಡೆದರೆ, ಅವರ ವಿರುದ್ಧ ಪೊಲೀಸರಿಗೆ ನೀಡಲಾಗಿರುವ ದೂರುಗಳನ್ನು ಹಿಂಪಡೆಯುವ ಬಗ್ಗೆ ಚಿಂತಿಸಲಾಗುವುದು ಭಾರತೀಯ ಎಂದು ವೈದ್ಯಕೀಯ ಸಂಘ (ಐಎಂಎ) ರಾಷ್ಟ್ರೀಯ ಮುಖ್ಯಸ್ಥ ಡಾ.ಜೆ.ಜಯಲಾಲ್ ಶುಕ್ರವಾರ ತಿಳಿಸಿದ್ದಾರೆ.

'ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವ ರಾಮದೇವ್ ವಾಸ್ತವವಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಬಾಬಾ ರಾಮದೇವ್ ವಿರುದ್ಧ ನಮಗೆ ವೈಯಕ್ತಿಕ ದ್ವೇಷವಿಲ್ಲ. ಅವರ ಹೇಳಿಕೆಗಳು ಕೋವಿಡ್‌ ಲಸಿಕೆ ಅಭಿಯಾನಕ್ಕೆ ವಿರುದ್ಧವಾಗಿವೆ. ಅವರ ಹೇಳಿಕೆಗಳು ಜನರನ್ನು ಗೊಂದಲಕ್ಕೀಡುಮಾಡಬಹುದು, ಜನರ ದಿಕ್ಕುತಪ್ಪಿಸಬಹುದು ಎಂದು ನಾವು ಭಾವಿಸುತ್ತೇವೆ. ಅವರಿಗೆ ಅನುಯಾಯಿಗಳು ಇರುವುದೂ ನಮಗೆ ಆತಂಕ ಮೂಡಿಸಿದೆ' ಎಂದು ಡಾ ಜಯಲಾಲ್ ಹೇಳಿದರು.

ತಮ್ಮ ಹೇಳಿಕೆಗಳನ್ನು ಅವರು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಮುಂದಾದರೆ, ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ದಾಖಲಾಗಿರುವ ದೂರುಗಳನ್ನು ಹಿಂಪಡೆಯಲು ಮತ್ತು ಅವರಿಗೆ ಕಳುಹಿಸಿರುವ ಮಾನನಷ್ಟ ಮೊಕದ್ದಮೆಯ ನೋಟಿಸ್ ಹಿಂಪಡೆಯಲು ಚಿಂತಿಸಲಾಗುವುದು ಎಂದು ಜಯಲಾಲ್‌ ಅವರು ತಿಳಿಸಿದ್ದಾರೆ.

ವೈದ್ಯರು, ಆಧುನಿಕ ವೈದ್ಯಕೀಯ ಪದ್ಧತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಐಎಂಎ ಕೆಲವು ದಿನಗಳ ಹಿಂದೆ ರಾಮದೇವ್‌ಗೆ ಮಾನನಷ್ಟ ಮೊಕದ್ದಮೆಯ ನೋಟಿಸ್‌ ನೀಡಿತ್ತು. 15 ದಿನಗಳಲ್ಲಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು