ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್ ಆರ್‌ಟಿ–ಪಿಸಿಆರ್, ಆರ್‌ಎಟಿ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳದು: ಕೇಂದ್ರ

Last Updated 30 ನವೆಂಬರ್ 2021, 11:36 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ನ ಓಮೈಕ್ರಾನ್ ರೂಪಾಂತರ ಹಲವು ದೇಶಗಳಲ್ಲಿ ಪ್ರಸರಣಗೊಳ್ಳುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯ ಸರ್ಕಾರಗಳ ಜತೆ ಪರಾಮರ್ಶೆ ಸಭೆ ನಡೆಸಿದರು.

ಕೋವಿಡ್ ಪ್ರಕರಣಗಳ ತ್ವರಿತ ಪತ್ತೆಹಚ್ಚುವಿಕೆಗಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸುವಂತೆ ಭೂಷಣ್ ಅವರು ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಸೂಚಿಸಿದ್ದಾರೆ.

ಕೊರೊನಾ ವೈರಸ್‌ನ ರೂಪಾಂತರಿತ ಓಮೈಕ್ರಾನ್ ತಳಿಯು ಆರ್‌ಟಿ–ಪಿಸಿಆರ್ ಹಾಗೂ ಆರ್‌ಎಟಿ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳದು ಎಂದು ಅವರು ಹೇಳಿದ್ದಾರೆ. ಸಾಕಷ್ಟು ಮೂಲಸೌಕರ್ಯಗಳು ಇರುವಂತೆ ನೋಡಿಕೊಳ್ಳಲು ಹಾಗೂ ಮನೆಯಲ್ಲೇ ಪ್ರತ್ಯೇಕ ವಾಸ ಮಾಡುವವರ ಮೇಲುಸ್ತುವಾರಿಗೆ ಸೂಕ್ತ ವ್ಯವಸ್ಥೆ, ಸಿದ್ಧತೆ ಮಾಡಿಕೊಳ್ಳುವಂತೆಯೂ ಅವರು ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

ಓಮೈಕ್ರಾನ್ ತಳಿಯಿಂದ ಉಂಟಾಗುವ ಸೋಂಕು ಈವರೆಗೆ ದೇಶದಲ್ಲಿ ದೃಢಪಟ್ಟಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT